ಬೆಂಗಳೂರು; ಶ್ರೀಗಂಧ ಮರ ಕಳವು ಪ್ರಕರಣ: ಐವರ ಬಂಧನ

ಬೆಂಗಳೂರು : ಸಾದರಹಳ್ಳಿಯ ಹಾಲಿವುಡ್ ಟೌನ್ ಬಡಾವಣೆಯಲ್ಲಿ ನಡೆದ ಶ್ರೀಗಂಧ ಮರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ, ದೇವನಹಳ್ಳಿ ಸಿಜೆ, ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಬಂಧಿತರನ್ನು ತುಮಕೂರು ಜಿಲ್ಲೆಯ ವೆಂಕಟೇಶ್ (51), ಆಂದ್ರಪ್ರದೇಶದ ಪುಟ್ಟಪರ್ತಿ ಜಿಲ್ಲೆಯ ವೆಂಕಟರಮಣ (42), ಬೆಂಗಳೂರು ನೆಲಮಂಗಳ ತಾಲೂಕಿನ ವೆಂಕಟೇಶ್ (28), ಚಿಕ್ಕಬಳ್ಳಾಪುರದ ಅನಿಲ್ ಕುಮಾರ್ (42) ಹಾಗು ಆಂದ್ರಪ್ರದೇಶ ಸತ್ಯಸಾಯಿ ಜಿಲ್ಲೆಯ ಕೃಷ್ಣಮೂರ್ತಿ (40) ಎಂದು ಗುರುತಿಸಲಾಗಿದೆ.
ಫೆ.9ರಂದು ರಾತ್ರಿ ಸಾದರಹಳ್ಳಿಯ ಹಾಲಿವುಡ್ ಟೌನ್ ಬಡಾವಣೆಯಲ್ಲಿ 15 ಅಡಿ ಎತ್ತರದ ಒಂದು ಶ್ರೀಗಂಧ ಮರ ಹಾಗು ಎ.20ರಂದು ರಾತ್ರಿ ಸುಮಾರು 20 ಅಡಿ ಎತ್ತರದ ಶ್ರೀಗಂಧ ಮರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 5 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





