ಪಿಎಸ್ಐ ಆಕ್ರಮ ಪ್ರಕರಣ : ಸಹಾಯಕ ಇಂಜಿನಿಯರ್ ಮಂಜುನಾಥ ಮೇಳಕುಂದಿ ಸಿಐಡಿಗೆ ಶರಣು

ಕಲಬುರಗಿ: ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಪ್ರಮುಖ ಆರೋಪಿ ಎನ್ನಲಾಗಿರುವ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಮಂಜುನಾಥ ಮೇಳಕುಂದಿ ರವಿವಾರ ಸಿಐಡಿ ಪೊಲೀಸರಿಗೆ ಶರಣಾಗಿದ್ದಾನೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ನಾಪತ್ತೆಯಾಗಿದ್ದ ಮಂಜುನಾಥ ಕಳೆದ 21 ದಿನಗಳಿಂದ ತಲೆ ಮರೆಸಿಕೊಂಡಿದ್ದು, ಈಗ ನಗರದ ಸಿಐಡಿ ಕಚೇರಿಗೆ ಬಂದು ಶರಣಾಗಿದ್ದಾನೆ.
ತನಗೆ ಹುಷಾರಿಲ್ಲದ ಕಾರಣ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ ಅದಕ್ಕಾಗಿ ಇಷ್ಟು ದಿನ ಬಂದಿರಲಿಲ್ಲ, ಈಗ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದರಿಂದ ಸಿಐಡಿ ಪೋಲಿಸರಿಗೆ ಶರಣಾಗುತ್ತಿರುವುದಾಗಿ ಹೇಳಿಕೆ ನೀಡಿದ್ದಾನೆ.
ಈಗಾಗಲೇ ಈ ಪ್ರಕರಣ ಪ್ರಮುಖರಾದ ಆರ್.ಡಿ. ಪಾಟೀಲ್, ದಿವ್ಯಾ ಹಾಗರಗಿ ಸೇರಿದಂತೆ ಮೂರು ದಿನಗಳಲ್ಲಿ 7 ಮಂದಿ ಆರೋಪಿಗಳು ಸಿಐಡಿ ಪೋಲಿಸರ ವಶದಲ್ಲಿದ್ದು, ಈಗಷ್ಟೆ ಶರಣಾಗಿರುವ ಮಂಜುನಾಥ ಮೇಳಕುಂದಿಯನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
Next Story







