ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಬೇಸಿಗೆ ಶಿಬಿರ

ಮಂಗಳೂರು : ಪ್ರಥಮ ವರ್ಷದ ಸಂಭ್ರಮದಲ್ಲಿರುವ ನಗರದ ಐಕ್ಯಮ್ ಕೇಂದ್ರದಲ್ಲಿ ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜಿಸಲಾಯಿತು.
ರಾಜ್ಯ ನರ ಮಾನಸಿಕ ರೋಗ ತಜ್ಞರ ಸಂಘದ ಅಧ್ಯಕ್ಷ ಡಾ. ಕಿರಣ್ ಕುಮಾರ್ ಪಿ.ಕೆ., ಖ್ಯಾತ ನರ ಮಾನಸಿಕ ರೋಗದ ತಜ್ಞ, ಸಾಹಿತಿ ಡಾ. ಅರುಣಾ ಯಡಿಯಾಳ್ ಮಾತನಾಡಿದರು.
ಕೇಂದ್ರದ ಅಧ್ಯಕ್ಷೆ ಕಸ್ತೂರಿ ಕುಂದರ್ ಮತ್ತಿತರರು ಉಪಸ್ಥಿತರಿದ್ದರು. ಕೇಂದ್ರದ ಕಾರ್ಯಧ್ಯಕ್ಷ, ವೈದ್ಯಕೀಯ ನಿರ್ದೇಶಕ ಡಾ.ಎಂ. ಅಣ್ಣಯ್ಯ ಕುಲಾಲ್ ಕಾರ್ಯಕ್ರಮ ಸಂಯೋಜಿಸಿದ್ದರು.
Next Story





