ಬೆಂಗಳೂರಿನಲ್ಲಿ ಮಂಗಳವಾರ ಈದುಲ್ ಫಿತ್ರ್: ಚಂದ್ರ ದರ್ಶನ ಸಮಿತಿ

ಬೆಂಗಳೂರು,ಮೇ.1: ಬೆಂಗಳೂರಿನಲ್ಲಿ ಈದುಲ್ ಫಿತ್ರ್(ರಮಝಾನ್) ಮಂಗಳವಾರ (ಮೇ.3) ಆಚರಣೆ ಮಾಡಲಾಗುವುದು ಎಂದು ಚಂದ್ರ ದರ್ಶನ ಸಮಿತಿ ಪ್ರಕಟಿಸಿದೆ.
ರವಿವಾರ ರಮಝಾನ್ ಹಬ್ಬ ಆಚರಣೆಗೆ ಸಂಬಂಧಿಸಿದಂತೆ ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕೇಂದ್ರ ಕಚೇರಿಯಲ್ಲಿ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ನೇತೃತ್ವದಲ್ಲಿ ನಡೆದ ಚಂದ್ರ ದರ್ಶನ ಸಮಿತಿಯ ಸಭೆಯಲ್ಲಿ ಮಂಗಳವಾರ ಹಬ್ಬ ಆಚರಣೆ ದಿನ ಘೋಷಿಸಲಾಯಿತು.
ದೇಶದ ಯಾವುದೇ ಭಾಗದಲ್ಲಿ ಚಂದ್ರ ದರ್ಶನವಾದ ಮಾಹಿತಿ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ರಂಜಾನ್ ಹಬ್ಬವನ್ನು ಮೇ 3ರಂದು ಮಂಗಳವಾರ ಆಚರಿಸಲು ಕೇಂದ್ರೀಯ ಚಂದ್ರ ದರ್ಶನ ಸಮಿತಿ ತೀರ್ಮಾನಿಸಿದೆ.
Next Story





