ಕೆ.ಎಸ್. ರಾವ್ ನಗರ ಜುಮಾ ಮಸೀದಿಯಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿಗೆ ಸನ್ಮಾನ

ಮುಲ್ಕಿ : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಇನಾಯತ್ ಅಲಿ ಅವರಿಗೆ ಶಾಫಿ ಜುಮಾ ಮಸೀದಿ ಕೆ.ಎಸ್. ರಾವ್ ನಗರ ಕೊಲ್ನಾಡು ಮುಲ್ಕಿ ಇದರ ವತಿಯಿಂದ ರವಿವಾರ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಮುಹಮ್ಮದ್ ಅಝ್ ಹರ್ ಫೈಝಿ ಬೊಳ್ಳೂರು ಉಸ್ತಾದ್ ಉದ್ಘಾಟಿಸಿದರು. ಮುಲ್ಕಿ ನಗರ ಪಂಚಾಯತ್ ನ ಮಾಜಿ ಅಧ್ಯಕ್ಷ ಬಿ.ಎಂ. ಆಸೀಫ್ ಕೊಲ್ನಾಡು ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜುಮಾ ಮಸೀದಿಯ ಖತೀಬ್ ಶರೀಫ್ ದಾರಿಮಿ, ಅದ್ಯಕ್ಷರಾದ ಎಂ.ಇ. ಹನೀಫ್, ಮಾಜೀ ಅಧ್ಯಕ್ಷರಾದ ಎ.ಎಚ್.ರಫೀಕ್, ಮುಹಮ್ಮದ್ ಮುಸ್ತಫಾ, ಬಶೀರ್ ಕೊಲ್ನಾಡು ಇದಿನಬ್ಬ ಮೊದಲಾದವರು ಉಪಸ್ಥಿತರಿದ್ದರು.