ವಾಮಂಜೂರು: ವಿಶ್ವ ಕಾರ್ಮಿಕ ದಿನಾಚರಣೆ

ಮಂಗಳೂರು : ಮೇ ದಿನಾಚರಣಾ ಸಮಿತಿ ವಾಮಂಜೂರು ಇದರ ವತಿಯಿಂದ ರವಿವಾರ ವಾಮಂಜೂರು ಜಂಕ್ಷನ್ ಬಳಿ ವಿಶ್ವ ಕಾರ್ಮಿಕರ ದಿನವನ್ನು ಆಚರಿಸಲಾಯಿತು.
ಈ ಸಂದರ್ಭ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅನೇಕ ಧರ್ಮದವರಿಗೆ ಅನೇಕ ಹಬ್ಬಗಳಿವೆ. ಆದರೆ ಎಲ್ಲಾ ಜಾತಿ, ಧರ್ಮ, ಭಾಷೆಯ ಗಡಿ ಮೀರಿದ ಕಾರ್ಮಿಕ ಧರ್ಮದ ಹಬ್ಬವೇ ಈ ಮೇ ದಿನವಾಗಿದೆ. ಇಂತಹ ದಿನವೊಂದು ೧೮೮೬ರಲ್ಲಿ ಅಮೆರಿಕದ ಚಿಕಾಗೋ ನಗರದಲ್ಲಿ ೮ ಗಂಟೆ ಕೆಲಸ ಮತ್ತು ೮ ಗಂಟೆಯ ವಿಶ್ರಾಂತಿ ಹಾಗೂ ೮ ಗಂಟೆಯ ನಿದ್ದೆ ಇತ್ಯಾದಿ ಬೇಡಿಕೆಗಳಿಗಾಗಿ ನಡೆದ ಹೋರಾಟದ ಫಲವಾಗಿ ಇಂದು ಐತಿಹಾಸಿಕ ಮೇ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.
ಸಿಪಿಎಂ ಗುರುಪುರ ವಲಯ ಕಾರ್ಯದರ್ಶಿ ಸದಾಶಿವ ದಾಸ್ ಮಾತನಾಡಿದರು. ಮೇ ದಿನಾಚರಣಾ ಸಮಿತಿ ವಾಮಂಜೂರು ಇದರ ಗೌರವಾಧ್ಯಕ್ಷ ಬಾಬು ಸಾಲ್ಯಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಕಾರ್ಯದರ್ಶಿ ಮನೋಜ್ ವಾಮಂಜೂರು ಸ್ವಾಗತಿಸಿದರು, ಸಮಿತಿಯ ಉಪಾಧ್ಯಕ್ಷ ಇಬ್ರಾಹಿಂ ದೇವಸ ವಂದಿಸಿದರು.
ಸಭೆಯಲ್ಲಿ ಅಶೋಕ್ ಬಂಗೇರ, ದಿನೇಶ್ ಬೊಂಡಂತಿಲ, ಪುಷ್ಪಹೊನ್ನಯ್ಯ ಅಮೀನ್, ಕೆ. ಮುಂಡಪ್ಪ ಉಪಸ್ಥಿತರಿದ್ದರು.