ಚುನಾವಣೆಯಲ್ಲಿ ಟಿಕೆಟ್ ನೀಡುವ ಕುರಿತ ಬಿ.ಎಲ್ ಸಂತೋಷ್ ಹೇಳಿಕೆಗೆ ಶಾಸಕ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದು ಹೀಗೆ...

ಬೆಂಗಳೂರು: ಗೆಲ್ಲುವ ಸಾಧ್ಯತೆ ಇರುವವರಿಗೆ ನಮ್ಮ ಪಕ್ಷದ ಬೆಂಬಲ ಇರಲಿದೆ. ಆದರೆ, ದುರ್ಬಲ ಇರುವ ಕ್ಷೇತ್ರದಲ್ಲಿ ಬದಲಾವಣೆ ಮಾಡಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಬಿಜೆಪಿ ಅಧಿಕಾರಕ್ಕೇರಲು ಹೊಸಮುಖಗಳು ಕಾರಣವೆಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಹೇಳಿಕೆಗೆ ರವಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಮದ್ದೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, 'ಸಂತೋಷ್ ಅವರು ಯಾವ ಉದ್ದೇಶದಿಂದ ಹೇಳಿದ್ದಾರೆ ಗೊತ್ತಿಲ್ಲ. ಸಾಮರ್ಥ್ಯ ಇರುವವರು ಎಲ್ಲಿದ್ದರೂ ಯಶಸ್ಸು ಕಾಣುತ್ತಾರೆ. ಆದರೆ, ನಮ್ಮ ಪಕ್ಷ ದುರ್ಬಲರಿಗೆ ಮಣೆ ಹಾಕುವುದಿಲ್ಲ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ' ಎಂದು ಸ್ಪಷ್ಟಪಡಿಸಿದರು.
'ಟಿಕೆಟ್ ಯಾರಿಗೆ ಕೊಡಬೇಕು ಮತ್ತು ಬಿಡಬೇಕು ಎಂಬುದು ಗೊತ್ತಿದೆ. ಟಿಕೆಟ್ ಕೊಡುವ ಮುನ್ನ ಎಲ್ಲರ ಅಭಿಪ್ರಾಯ ಸಲಹೆ ಪಡೆಯಲಾಗುತ್ತಿದೆ. ನಮ್ಮ ಕಡೆಯವರಿಗೆ ಟಿಕೆಟ್ ಕೊಡಬೇಕೆಂದು ಸೆರಗು, ಪಂಚೆ ಹಿಡಿದುಕೊಂಡು ಬೆಂಗಳೂರಿಗೆ ಬರುವುದು ಬೇಡ' ಎಂದು ಬಿ.ಎಲ್. ಸಂತೋಷ್





