ಉಡುಪಿ: ಮತ್ತಿಬ್ಬರಲ್ಲಿ ಕೊರೋನ ಸೋಂಕು ಪತ್ತೆ; ಒಟ್ಟು ಐದು ಸಕ್ರಿಯ ಪ್ರಕರಣ
ಉಡುಪಿ : ಜಿಲ್ಲೆಯಲ್ಲಿ ಸತತ ಮೂರನೇ ದಿನವೂ ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಮವಾರ ಇಬ್ಬರಲ್ಲಿ ಸೋಂಕು ಕಂಡು ಬಂದಿದೆ. ಈ ಮೂಲಕ ಕಳೆದ ನಾಲ್ಕು ದಿನಗಳಲ್ಲಿ ಜಿಲ್ಲೆಯಲ್ಲಿ ಒಟ್ಟು ಐದು ಸಕ್ರಿಯ ಪ್ರಕರಣಗಳಿವೆ.
ಸೋಮವಾರ ಜಿಲ್ಲೆಯಲ್ಲಿ ಒಬ್ಬ ಪುರುಷ ಹಾಗೂ ಓರ್ವ ಮಹಿಳೆ ಕೋವಿಡ್‌ಗೆ ಪಾಸಿಟಿವ್ ಬಂದಿದ್ದಾರೆ. ಇದರಿಂದ ಜಿಲ್ಲೆಯಲ್ಲೀಗ ನಾಲ್ವರು ಮಹಿಳೆಯರು ಹಾಗೂ ಓರ್ವ ಪುರುಷರು ಕೋವಿಡ್ ಸೋಂಕಿಗಾಗಿ ಚಿಕಿತ್ಸೆ ಪಡೆಯುತಿ ದ್ದಾರೆ. ಇವರಲ್ಲಿ ಓರ್ವ ಮಹಿಳೆಗೆ ಮಾತ್ರ ಆಸ್ಪತ್ರೆಯ ಜನರಲ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಇಂದು ಒಟ್ಟು 46 ಮಂದಿಯನ್ನು ಕೋವಿಡ್ ಪರೀಕ್ಷೆ ಗೊಳಪಡಿಸಲಾಗಿದ್ದು, ಉಡುಪಿ ತಾಲೂಕಿನ 30 ಮಂದಿಯಲ್ಲಿ ಒಬ್ಬರು ಹಾಗೂ ಕುಂದಾಪುರ ತಾಲೂಕಿನ 12 ಮಂದಿಯಲ್ಲಿ ಒಬ್ಬರು ಪಾಸಿಟಿವ್ ಬಂದಿದ್ದಾರೆ. ಕಾರ್ಕಳ ತಾಲೂಕಿನ ನಾಲ್ವರಲ್ಲಿ ಸೋಂಕು ಪತ್ತೆಯಾಗಿಲ್ಲ.
883 ಮಕ್ಕಳಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು ೧೧೪೨ ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ ೮೮೩ ಮಂದಿ ೧೨ರಿಂದ ೧೪ ವರ್ಷದೊಳಗಿನ ಮಕ್ಕಳೂ ಸೇರಿದ್ದಾರೆ.೫೧ ಮಕ್ಕಳಿಗೆ ಮೊದಲ ಡೋಸ್ ನೀಡಿದ್ದರೆ, ೮೩೨ ಮಂದಿ ಮಕ್ಕಳು ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯ ೩೦,೪೫೭ ಮಂದಿಗೆ ಮೊದಲ ಡೋಸ್ ಹಾಗೂ ೯೭೮೧ ಮಂದಿ ಎರಡನೇ ಡೋಸ್ ಪಡೆದಿದ್ದಾರೆ.
೧೫ರಿಂದ ೧೮ ವರ್ಷದೊಳಗಿನ ಎಂಟು ಮಂದಿಗೆ ಮೊದಲ ಡೋಸ್ ಹಾಗೂ ೮ ಮಂದಿಗೆ ಎರಡನೇ ಡೋಸ್ ನೀಡಲಾಗಿದೆ. ಒಟ್ಟಾರೆಯಾಗಿ ಇಂದು ೬೮ ಮಂದಿಗೆ ಮೊದಲ ಡೋಸ್, ೯೦೭ ಮಂದಿ ಎರಡನೇ ಡೋಸ್ ಹಾಗೂ ೧೬೭ ಮಂದಿಗೆ ಎಚ್ಚರಿಕೆಯ ಡೋಸ್‌ನ್ನು ನೀಡಲಾಗಿದೆ.
ಜಿಲ್ಲೆಯಲ್ಲಿ ೬೦ ವರ್ಷ ಮೇಲಿನ ೧೫೬ ಮಂದಿ ಎಚ್ಚರಿಕೆ ಡೋಸ್ ಪಡೆದಿದ್ದು, ಈವರೆಗೆ ಒಟ್ಟಾರೆಯಾಗಿ ಒಟ್ಟು ೪೯,೧೪೫ ಮಂದಿ ಮುನ್ನೆಚ್ಚರಿಕೆ ಡೋಸ್ ಪಡೆದಿದ್ದು, ಎಲ್ಲರೂ ಸೇರಿ ಒಟ್ಟು ೬೬,೭೫೧ ಮಂದಿ ಇಂದಿನವರೆಗೆ ಈ ಲಸಿಕೆ ಯನ್ನು ಪಡೆದುಕೊಂಡಿದ್ದಾರೆ.