ಮಂಗಳೂರಿನಲ್ಲಿ ಕವಿತಾ ಫೆಸ್ತ್ ಕಾರ್ಯಕ್ರಮ

ಮಂಗಳೂರು : ಕೊಂಕಣಿ ಕವಿತೆ ಹಾಗೂ ಕಾವ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡುತ್ತಾ ಬಂದಿರುವ ಕವಿತಾ ಟ್ರಸ್ಟ್ ವತಿಯಿಂದ ವರ್ಷಂಪ್ರತಿ ನಡೆಸಲ್ಪಡುವ ಕವಿತಾ ಫೆಸ್ತ್ ಕಾರ್ಯಕ್ರಮವು ಇತ್ತೀಚೆಗೆ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆಯಿತು.
ಕವಯತ್ರಿ ಉಶಾಪ್ರಭಾ ನಾಯಕ್ ಹಾಗೂ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಜಿ. ನಂದಗೋಪಾಲ್ ಶೆಣೈ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಕೊಂಕಣಿ ಅಕಾಡಮಿ ಪ್ರಶಸ್ತಿ ವಿಜೇತ ಜೆ.ವಿ ಸಿಕ್ವೇರಾ ಅವರೊಂದಿಗೆ ಟ್ರಸ್ಟಿ ಅಂಡ್ರ್ಯು ಎಲ್. ಡಿಕುನ್ಹಾ ಸಂವಾದ ನಡೆಸಿಕೊಟ್ಟರು. ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಕಿರಿಯ ಹಾಗೂ ಹಿರಿಯ ವಿಭಾಗಗಳಲ್ಲಿ ನೆಲ್ಸನ್ ಹಾಗೂ ಲವೀನ ರೊಡ್ರಿಗಸ್ ಪ್ರಾಯೋಜಿತ ಎಂಟನೇ ಆವೃತ್ತಿಯ ಚಾಫ್ರಾ ದೆಕೋಸ್ತಾ ಸ್ಮಾರಕ ಮಕ್ಕಳ ಕವಿತಾ ವಾಚನ ಸ್ಪಧೆಗಳು ಹನ್ನೊಂದನೇ ಆವೃತ್ತಿಯ ಯುವ ಕವಿತಾ ವಾಚನ ಸ್ಪರ್ಧೆಗಳು ನಡೆದವು.
ಸಮಾರೋಪ ಕಾರ್ಯಕ್ರಮದಲ್ಲಿ ಕೊಂಕಣಿ ಭಾಶಾ ಮಂಡಳ್ ಗೋವಾದ ಮಾಜಿ ಅಧ್ಯಕ್ಷ ಚೇತನ್ ಆಚಾರ್ಯ, ಕವಯತ್ರಿ ಯೋಗಿನಿ ಆಚಾರ್ಯ, ವಿಶ್ವ ಕೊಂಕಣಿ ಕೇಂದ್ರ ಸಿಇಒ ಗುರು ಬಾಳಿಗ, ಕವಿತಾ ಟ್ರಸ್ಟ್ ಅಧ್ಯಕ್ಷ ಕಿಶೂ ಬಾರ್ಕೂರು, ಕಾರ್ಯದರ್ಶಿ ಎವ್ರೆಲ್ ರೊಡ್ರಿಗಸ್ ಉಪಸ್ಥಿತರಿದ್ದರು.
ಈ ಸಂದರ್ಭ ಕೊಂಕಣಿ ಕವಿ ಆರ್. ರಾಮ್‌ನಾಥ್‌ಗೆ ೨೦೨೧ನೇ ಸಾಲಿನ ಮಥಾಯಸ್ ಕುಟಾಮ್ ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಯಿತು. ಟ್ರಸ್ಟಿ ವಿಲ್ಲಿಯಂ ಪಾಯ್ಸ್ ಪುರಸ್ಕಾರ ವಿಜೇತರನ್ನು ಪರಿಚಯಿಸಿದರು. ಕಿಶೂ ಬಾರ್ಕೂರು ಕವಿತಾ ಟ್ರಸ್ಟಿನ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಕವಿತಾ ಟ್ರಸ್ಟ್ ಸಂಸ್ಥಾಪಕ, ಕವಿ ಮೆಲ್ವಿನ್ ರೊಡ್ರಿಗಸ್ ವಂದಿಸಿದರು. ವಿತೊರಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.







