ಉಡುಪಿ; ಹಾಶಿಮಿ ಮಸೀದಿಯಲ್ಲಿ ಈದುಲ್ ಫಿತ್ರ್

ಉಡುಪಿ: ನಾಯರ್ ಕೆರೆ, ಬ್ರಹ್ಮಗಿರಿಯ ಹಾಶಿಮಿ ಮಸೀದಿಯಲ್ಲಿ ಸೋಮವಾರ ಈದುಲ್ ಫಿತ್ರ್ ಆಚರಿಸಲಾಯಿತು.
ಮೌಲಾನ ಸಯೀದ್ ಹುಸೈನ್ ಅವರು ಬೆಳಗ್ಗೆ 8.30 ಕ್ಕೆ ಈದ್ ನಮಾಝ್ ಮುನ್ನಡೆಸಿದರು. ನಂತರ ಅವರು ಪವಿತ್ರ ರಮಝಾನ್ ಮಹತ್ವ ಮತ್ತು ಅದರ ಪ್ರಯೋಜನಗಳನ್ನು ವಿವರಿಸಿದರು.
ಈದ್ ಪ್ರಾರ್ಥನೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನಂತರ ಹಾಶಿಮಿ ಮಸೀದಿ ಆಡಳಿತ ಸಮಿತಿಯ ಸದಸ್ಯರು ಸಿಹಿ ವಿತರಿಸಿದರು ಎಂದು ಹಾಶಿಮಿ ಮಸೀದಿಯ ಎಂ.ಇಕ್ಬಾಲ್ ಮನ್ನಾ ತಿಳಿಸಿದ್ದಾರೆ.
Next Story




.jpeg)


