ಸಜೀವ ಗ್ರೆನೇಡ್ ಪತ್ತೆ : ಶ್ರೀನಗರ ವಿಮಾನ ನಿಲ್ದಾಣದಲ್ಲಿ ಯೋಧ ವಶಕ್ಕೆ

ಶ್ರೀನಗರ, ಮೇ 2: ಚೆನ್ನೈಗೆ ತೆರಳಲು ಇಲ್ಲಿನ ವಿಮಾನ ನಿಲ್ದಾಣಕ್ಕೆ ಸೋಮವಾರ ಆಗಮಿಸಿದ ಯೋಧನೋರ್ವನ ಸರಂಜಾಮುಗಳಲ್ಲಿ ಸಜೀವ ಗ್ರೆನೇಡ್ ಪತ್ತೆಯಾದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೋಧನನ್ನು ಬಾಲಾಜಿ ಸಂಪತ್ ಎಂದು ಗುರುತಿಸಲಾಗಿದೆ. ಈತ ತಮಿಳುನಾಡಿನ ನಿವಾಸಿ. ಇಂಡಿಗೊ ವಿಮಾನದಲ್ಲಿ ಶ್ರೀನಗರದಿಂದ ದಿಲ್ಲಿ ಮೂಲಕ ಚೆನ್ನೈಗೆ ಪ್ರಯಾಣಿಸಲು ನಿರ್ಧರಿಸಿದ್ದ. ‘‘ಯೋಧನ ಸರಂಜಾಮುಗಳನ್ನು ಪರಿಶೀಲನೆ ನಡೆಸುವಾಗ ಸಜೀವ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದೆ. ಆತನನ್ನು ಮುಂದಿನ ತನಿಖೆಗೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story





