ಹೈದರಾಬಾದ್: ರೈಲಿಗಾಗಿ ಕಾಯುತ್ತಿದ್ದ ಗರ್ಭಿಣಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ದುಷ್ಕರ್ಮಿಗಳು

ಹೈದರಾಬಾದ್, ಮೇ 2: ತನ್ನ ಪತಿ ಹಾಗೂ ಮೂವರು ಮಕ್ಕಳೊಂದಿಗೆ ತಡ ರಾತ್ರಿಯ ರೈಲಿಗೆ ಕಾಯುತ್ತಿದ್ದ ಗರ್ಭಿಣಿಯನ್ನು ಮೂವರು ದುಷ್ಕರ್ಮಿಗಳು ಅಪಹರಿಸಿ ರೈಲು ನಿಲ್ದಾಣದ ಸಮೀಪ ಸಾಮೂಹಿಕ ಅತ್ಯಾಚಾರಗೈದ ಘಟನೆ ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ನಡೆದಿದೆ.
ಮಹಿಳೆಯನ್ನು ಅಪಹರಿಸಿದ ಸಂದರ್ಭ ಬೊಬ್ಬೆ ಹಾಕಿದ ಹಾಗೂ ರೈಲ್ವೆ ಪೊಲೀಸರ ನೆರವು ಪಡೆಯಲು ಪ್ರಯತ್ನಿಸಿದ ಪತಿಗೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಥಳಿಸಿದ್ದಾರೆ. ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಅಪ್ರಾಪ್ತ ಸೇರಿದಂತೆ ಎಲ್ಲ ಮೂವರನ್ನು ಬಂಧಿಸಲಾಗಿದೆ. ಈ ಘಟನೆ ಶನಿವಾರ ಹಾಗೂ ರವಿವಾರದ ಮಧ್ಯ ರಾತ್ರಿ ನಡೆದಿದೆ. ಪ್ರಕಾಶಂ ಜಿಲ್ಲೆಯ ಈ ಕುಟುಂಬ ಕೆಲಸ ಹುಡುಕಿಕೊಂಡು ಗುಂಟೂರು ಜಿಲ್ಲೆಯಿಂದ ಕೃಷ್ಣಾ ಜಿಲ್ಲೆಯತ್ತ ತೆರಳಲು ರೈಲಿಗಾಗಿ ರೈಲು ನಿಲ್ದಾಣದಲ್ಲಿ ನಿಂತಿದ್ದ ಸಂದರ್ಭ ಘಟನೆ ಸಂಭವಿಸಿದೆ.
Next Story





