ಈದ್ ಶುಭಾಶಯ ಕೋರಿದ ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡ ಅವರು ಮಂಗಳವಾರ ಟ್ವೀಟ್ ಮೂಲಕ ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಈದುಲ್ ಫಿತ್ರ್ ಶುಭಾಶಯಗಳನ್ನು ಕೋರಿದ್ದಾರೆ.
ಈ ಕುರಿತು ಟ್ವೀಟಿಸಿರುವ ಅವರು ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಈದುಲ್ ಫಿತ್ರ್(ಪವಿತ್ರ ರಮಝಾನ್)ಹಬ್ಬದ ಶುಭಾಶಯಗಳು. ಪ್ರೇಮ, ಸಹಿಷ್ಣುತೆ, ಮಾನವೀಯತೆಯನ್ನು ಸಾರುವ ಈ ಪುಣ್ಯದಿನವು ಎಲ್ಲರಿಗೂ ಸ್ಫೂರ್ತಿಯಾಗಲಿ. ಎಲ್ಲೆಡೆಯೂ ಸುಖ, ಶಾಂತಿ,ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ. ಶುಭವಾಗಲಿ ಎಂದು ಬರೆದಿದ್ದಾರೆ.
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್-ಉಲ್-ಫಿತರ್ (ಪವಿತ್ರ ರಂಜಾನ್) ಹಬ್ಬದ ಹಾರ್ದಿಕ ಶುಭಾಶಯಗಳು.
— H D Devegowda (@H_D_Devegowda) May 3, 2022
ಪ್ರೇಮ, ಸಹಿಷ್ಣುತೆ, ಮಾನವೀಯತೆಯನ್ನು ಸಾರುವ ಈ ಪುಣ್ಯದಿನವು ಎಲ್ಲರಿಗೂ ಸ್ಫೂರ್ತಿಯಾಗಲಿ. ಎಲ್ಲೆಡೆಯೂ ಸುಖ, ಶಾಂತಿ, ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ. ಶುಭವಾಗಲಿ.
Next Story





