Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಪಂಪ್ ಆಪರೇಟರ್ ಮಗಳು ಈಗ ವಿಶ್ವ ಜೂನಿಯರ್...

ಪಂಪ್ ಆಪರೇಟರ್ ಮಗಳು ಈಗ ವಿಶ್ವ ಜೂನಿಯರ್ ವೇಟ್‍ಲಿಫ್ಟಿಂಗ್ ಚಾಂಪಿಯನ್

ವಾರ್ತಾಭಾರತಿವಾರ್ತಾಭಾರತಿ3 May 2022 8:29 AM IST
share
ಪಂಪ್ ಆಪರೇಟರ್ ಮಗಳು ಈಗ ವಿಶ್ವ ಜೂನಿಯರ್ ವೇಟ್‍ಲಿಫ್ಟಿಂಗ್ ಚಾಂಪಿಯನ್

ಚೆನ್ನೈ: ಪುಣೆ ನಗರದ ವಡಗಾಂವ್ ಮಾವಲ್ ಟೌನ್ ಸಮೀಪದ ಗ್ರಾಮಪಂಚಾಯ್ತಿಯಲ್ಲಿ ಪಂಪ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶರತ್ ಗರುಡ್ ಕಂಡ ಕನಸು ಇದೀಗ ನನಸಾಗಿದೆ. ಅವರ ಪುತ್ರಿ ಹರ್ಷದಾ ಗರುಡ್ ಈಗ ವಿಶ್ವ ಜೂನಿಯರ್ ವೇಟ್‍ಲಿಫ್ಟಿಂಗ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

18ರ ವಯಸ್ಸಿನ ಹರ್ಷದಾ ಗ್ರೀಸ್‍ನ ಹೆರಾಕ್ಲಿಯಾನ್‍ನಲ್ಲಿ ನಡೆಯುತ್ತಿರುವ ಐಡಬ್ಲ್ಯುಎಫ್ ಜೂನಿಯರ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದ ಮೊಟ್ಟಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಅವರು ಸೋಮವಾರ ಪಾತ್ರರಾದರು. 45 ಕೆಜಿ ವಿಭಾಗದಲ್ಲಿ ಒಟ್ಟು 153 ಕೆಜಿ (70 ಕೆಜಿ + 83 ಕೆಜಿ) ಭಾರ ಎತ್ತುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿ, ಸ್ಪರ್ಧೆಯ ಆರಂಭದ ದಿನವೇ ಭಾರತದ ಪದಕದ ಖಾತೆ ತೆರೆದರು. ಸ್ಲ್ಯಾಚ್‍ನಲ್ಲಿ 70 ಕೆಜಿ ಭಾರ ಎತ್ತುವ ಮೂಲಕ ಹರ್ಷದಾ ಅಗ್ರಸ್ಥಾನಕ್ಕೇರಿದರು. ಇದಕ್ಕೂ ಮುನ್ನ ಕ್ಲೀನ್ ಮತ್ತು ಜೆರ್ಕ್ ವಿಭಾಗದಲ್ಲಿ ಅವರು ಎರಡನೇ ಸ್ಥಾನ ಗಳಿಸಿದ್ದರು. ಟರ್ಕಿಯ ಬೆಕ್ತಾಸ್ ಕ್ಯಾನ್ಸು (85) ಜೆರ್ಕ್ ನಲ್ಲಿ ಅಗ್ರಸ್ಥಾನಿಯಾಗಿದ್ದರು. ಆದರೆ ಒಟ್ಟಾರೆಯಾಗಿ 150 ಕೆಜಿ ಭಾರ ಎತ್ತುವ ಮೂಲಕ  ಕ್ಯಾನ್ಸು ಅವರು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಐದು ವರ್ಷದ ಹಿಂದೆ ತನ್ನ 13 ವರ್ಷದ ಮಗಳು 50 ಕೆಜಿ ಅಕ್ಕಿ ಮೂಟೆಯನ್ನು ಅನಾಯಾಸವಾಗಿ ಎಳೆದದ್ದನ್ನು ಕಂಡ ಗರುಡ್, ಮಗಳು ಭಾರ ಎತ್ತುವ ಸ್ಪರ್ಧೆಯಲ್ಲಿ ಚಾಂಪಿಯನ್ ಆಗುವ ಕನಸು ಕಂಡಿದ್ದರು. ರಾಜ್ಯಮಟ್ಟದ ಶಾಲಾ ಗೇಮ್ಸ್ ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದ ಹರ್ಷದಾ  ಬಳಿಕ ಹಣಕಾಸು ತೊಂದರೆಯ ಕಾರಣದಿಂದ ಕ್ರೀಡೆ ತ್ಯಜಿಸಿದ್ದರು.

ವೃತ್ತಿಯಲ್ಲಿ ಪಂಪ್ ಆಪರೇಟರ್ ಆಗಿರುವ ಗರುಡ್, ತಮ್ಮ ಮಗಳ ಬಗ್ಗೆ ದೊಡ್ಡ ಕನಸು ಕಂಡಿದ್ದರು. ತಕ್ಷಣವೇ ಬಾಲಕಿಯನ್ನು ದುಬೇಸ್ ಗುರುಕುಲಕ್ಕೆ ಸೇರಿಸಿದರು. ಅಲ್ಲಿ ಕೋಚ್ ಬಿಹಾರಿಲಾಲ್ ದುಬೆ ಮಾರ್ಗದರ್ಶನದಲ್ಲಿ ಕ್ಷಿಪ್ರ ಅವಧಿಯಲ್ಲೇ ದೊಡ್ಡ ಸಾಧನೆ ಮಾಡಿದಳು. 2020ರ ಖೇಲೊ ಇಂಡಿಯಾ  ಗೇಮ್ಸ್ ನಲ್ಲಿ ಹರ್ಷದಾ ಚಿನ್ನದ ಪದಕ ಗಳಿಸಿದರು. ಇದು ಎನ್‍ಐಎಸ್ ಪಾಟಿಯಾಲಾದಲ್ಲಿ ರಾಷ್ಟ್ರೀಯ ಶಿಬಿರಕ್ಕೆ ಅವರ ಸ್ಥಾನ ಖಚಿತಪಡಿಸಿತು. ಇದು ಬಾಲಕಿಗೆ ತಮ್ಮ ಕ್ಷಮತೆಯನ್ನು ಗಣನೀಯವಾಗಿ ಸುಧಾರಿಸಿಕೊಳ್ಳಲು ನೆರವಾಯಿತು. ಅತ್ಯಂತ ಪ್ರಮುಖ ಅಂಶವೆಂದರೆ ಅಲ್ಲಿ ಆಕೆ ಪಡೆಯುತ್ತಿದ್ದ ಆಹಾರ ಕ್ರಮ ಆಕೆಯ ನೆರವಿಗೆ ಬಂತು ಎಂದು ಕೋಚ್ ದುಬೆ ವಿವರಿಸಿದರು.

ತಂದೆ ಗರುಡ್ ಮಗಳ ಬಗ್ಗೆ ಕನಸು ಕಂಡಿದ್ದರೂ ಬಾಲಕಿಯನ್ನು ಭಾರ ಎತ್ತುವ ಕ್ರೀಡೆಗೆ ಆಯ್ಕೆ ಮಾಡುವ ಮುನ್ನ ಕೋಚ್ ಆಕೆಯ ಕೌಶಲವನ್ನು ಪರೀಕ್ಷಿಸಿದ್ದರು. ಬಾಲಕಿಯ ಸಾಧನೆ ಹೆಮ್ಮೆ ತಂದಿದೆ ಎಂದು ಕೋಚ್ ಹೇಳಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‍ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಮೀರಾಬಾಯಿ ಚಾನು 2013ರಲ್ಲಿ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಕಳೆದ ವರ್ಷ ಭಾರತದ ಅಚಿಂತಾ ಶೇವ್ಲಿ ಇದೇ ಸ್ಪರ್ಧೆಯಲ್ಲಿ ಬೆಳ್ಳಿಪದಕ ಪಡೆದಿದ್ದರು. ಹರ್ಷದಾ ಚಿನ್ನದ ಸಾಧನೆ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಕಿರಿಯರ ವೇಟ್‍ಲಿಫ್ಟಿಂಗ್‍ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನಿಸಿಕೊಂಡರು.

ಪುತ್ರಿಯ ಅಮೋಘ ಸಾಧನೆಯಿಂದ ಖುಷಿಯಾಗಿರುವ ಗರುಡ್, "ಆಕೆಯ ದೇಹ ಸಂರಚನೆಯೇ ಭಿನ್ನ. ಈ ಅದೃಷ್ಟದ ದಿನ ಆಕೆ ವೇಟ್‍ಲಿಫ್ಟಿಂಗ್‍ನಲ್ಲಿ ದೊಡ್ಡ ಸಾಧನೆ ಮಾಡುತ್ತಾಳೆ ಎನ್ನುವುದು ಖಾತ್ರಿಯಾಗಿದೆ" ಎಂದು ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X