ಸಂತೋಷ್ ಟ್ರೋಫಿ ಜಯಿಸಿದ ಕೇರಳ ಫುಟ್ಬಾಲ್ ತಂಡಕ್ಕೆ 1 ಕೋ.ರೂ. ಬಹುಮಾನ ನೀಡಿದ ಉದ್ಯಮಿ ಡಾ.ಶಂಶೀರ್ ವಯಾಲಿಲ್

Photo:twitter
ಮಲಪ್ಪುರಂ: ಪಶ್ಚಿಮಬಂಗಾಳ ತಂಡವನ್ನು ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ ನಲ್ಲಿ 5-4 ಅಂತರದಿಂದ ಮಣಿಸಿ 7ನೇ ಬಾರಿ ಸಂತೋಷ್ ಟ್ರೋಫಿ ಎತ್ತಿ ಹಿಡಿದಿರುವ ಕೇರಳ ಫುಟ್ಬಾಲ್ ತಂಡಕ್ಕೆ ಈ ಮೊದಲೇ ಘೋಷಿಸಿದಂತೆ 1 ಕೋ.ರೂ. ಬಹುಮಾನವನ್ನು ನೀಡುವುದಾಗಿ ಯುಎಇ ಮೂಲದ ಕೇರಳ ಉದ್ಯಮಿ ಡಾ. ಶಂಶೀರ್ ವಯಾಲಿಲ್ ಟ್ವೀಟ್ ಮಾಡಿದ್ದಾರೆ.
"ಎಂತಹ ಶ್ರೇಷ್ಠ ಪಂದ್ಯ! 7ನೇ ಬಾರಿಗೆ ಸಂತೋಷ್ ಟ್ರೋಫಿ ಎತ್ತಿ ಹಿಡಿದಿದ್ದಕ್ಕಾಗಿ ಕೇರಳ ತಂಡಕ್ಕೆ ಅಭಿನಂದನೆಗಳು. ಈ ಮೊದಲೇ ಘೋಷಿಸಿದಂತೆ 1 ಕೋ.ರೂ ನೀಡಿ ನಿಮ್ಮನ್ನು ಗೌರವಿಸಲು ಸಂತೋಷವಾಗುತ್ತಿದೆ. ಪಶ್ಚಿಮ ಬಂಗಾಳ ಚೆನ್ನಾಗಿ ಆಡಿದೆ'' ಎಂದು ಡಾ. ಶಂಶೀರ್ ಟ್ವೀಟಿಸಿದ್ದಾರೆ.
ವಿಪಿಎಸ್ ಹೆಲ್ತ್ಕೇರ್ನ ಎಂಡಿ ಆಗಿರುವ ಶಂಶೀರ್ ಕೇರಳ ತಂಡವು ಸಂತೋಷ್ ಟ್ರೋಫಿಯನ್ನು ಜಯಿಸಿದರೆ 1 ಕೋ.ರೂ. ಬಹುಮಾನವನ್ನು ನೀಡುವುದಾಗಿ ಪಂದ್ಯದ ದಿನವೇ ಟ್ವಿಟರ್ ನಲ್ಲಿ ಘೋಷಿಸಿದ್ದರು.
Next Story







