ಅಮಿತ್ ಶಾ ಭೇಟಿಯಾದ ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ

ಬೆಂಗಳೂರು: ಹಿರಿಯ ಜನತಾದಳ (ಜಾತ್ಯತೀತ) ನಾಯಕ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮಂಗಳವಾರ ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
72 ವರ್ಷ ವಯಸ್ಸಿನ ಹೊರಟ್ಟಿ, 1980 ರಿಂದ ಸತತ ಏಳು ಬಾರಿ ಎಂಎಲ್‌ಸಿಯಾಗಿ ಆಯ್ಕೆಯಾಗಿದ್ದರು, ಜೆಡಿ (ಎಸ್) ನ ಪ್ರಮುಖ ಲಿಂಗಾಯತ ನಾಯಕನಾಗಿದ್ದಾರೆ. ಉತ್ತರ ಕರ್ನಾಟಕ ಪ್ರದೇಶದ ಪ್ರಮುಖ ಜೆಡಿ (ಎಸ್) ನಾಯಕರೂ ಆಗಿರುವ ಹೊರಟ್ಟಿ ಈ ಹಿಂದೆ ರಾಜ್ಯ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು.
Next Story





