ಬದ್ರಿಯಾ ಜುಮಾ ಮಸೀದಿ ಬಜಾಲ್- ನಂತೂರ್ ನಲ್ಲಿ ಸಂಭ್ರಮದ ಈದುಲ್ ಫಿತ್ರ್ ಆಚರಣೆ

ಮಂಗಳೂರು, ಮೇ 3: ಈದುಲ್ ಫಿತ್ರ್ ಅಂಗವಾಗಿ ಬದ್ರಿಯಾ ಜುಮಾ ಮಸೀದಿ ಬಜಾಲ್- ನಂತೂರ್ ನಲ್ಲಿ ಈದ್ ನಮಾಜು ಹಾಗೂ ಖುತುಬಾ ಪಾರಾಯಣ ನಡೆಯಿತು.
ಜಮಾತ್ ಖತೀಬರಾದ ಪಿ.ಎಸ್. ಮುಹಮ್ಮದ್ ಕಾಮಿಲ್ ಸಖಾಫಿ ಈದ್ ಸಂದೇಶದಲ್ಲಿ, ಪರಸ್ಪರ ಸೌಹಾರ್ದತೆಯಿಂದ ಊರಿನ ಒಳಿತಿಗಾಗಿ ಕೈಜೋಡಿಸಿ ಹಾಗೂ ಕುಟುಂಬ ಸಂಬಂಧ ಬೆಳೆಸಿರಿ ಎಂದು ಕರೆ ನೀಡಿದರು.
ಜಮಾತ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ರವೂಫ್, ಹಿರಿಯರಾದ ಹಾಜಿ ಬಿ ಏನ್ ಅಬ್ಬಾಸ್, ಬಿ ಅಹಮದ್ ಬಾವ, ಬಿ ಪಕ್ರುದ್ಧಿನ್, ಮನಪಾ ಸದಸ್ಯರಾದ ಅಶ್ರಫ್ ಕೆ ಈ, ನಝೀರ್ ಬಜಾಲ್, ಜಮಾತ್ ಸಮಿತಿ ಸದಸ್ಯರು, ನೂರಾರು ಜ್ಜಮತರು ಉಪಸ್ಥಿತರಿದ್ದರು.

Next Story





