ಅಕ್ರಮ ಮರಳು ಸಾಗಾಟ: ಪಿಕ್ ಅಪ್ ವಾಹನ, ಚಾಲಕ ವಶಕ್ಕೆ
ಮಂಗಳೂರು: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಪಿಕ್ ಅಪ್ ವಾಹನ, ಚಾಲಕನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಸೋಮವಾರ ಜಪ್ಪಿನಮೊಗರು ಆಡಂಕುದ್ರು ಬಳಿ ವಶಪಡಿಸಿಕೊಂಡಿದ್ದಾರೆ.
ಪೊಲೀಸರು ಜಪ್ಪಿನಮೊಗರು ಆಡಂಕುದ್ರು ಬಳಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಸಂದರ್ಭ ರಾತ್ರಿ 9.45ರ ಸುಮಾರಿಗೆ ಆಡಂಕುದ್ರುವಿನಿಂದ ಹೆದ್ದಾರಿಗೆ ಬರುತ್ತಿದ್ದ ಪಿಕ್ ಅಪ್ ವಾಹನವನ್ನು ಪರಿಶೀಲಿಸಿದಾಗ ಮರಳು ತುಂಬಿತ್ತು. ಮರಳು ಸಾಗಾಟದ ಬಗ್ಗೆ ಯಾವುದೇ ದಾಖಲಾತಿ ಇಲ್ಲದ ಕಾರಣ ಚಾಲಕ ಉಳ್ಳಾಲ ಮುಳ್ಳುಗುಡ್ಡೆ ಕೆ.ಸಿ.ರೋಡ್‌ನ ಶಾಫಿಕ್(30) ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತಾನು ವಾಹನದ ಮಾಲಕರ ಸೂಚನೆಯಂತೆ ಆಡಂಕುದ್ರು ನೇತ್ರಾವತಿ ನದಿ ತೀರದಿಂದ ಅಕ್ರಮವಾಗಿ ಮರಳು ತುಂಬಿಸಿಕೊಂಡು ಕೆ.ಸಿ.ರೋಡ್ ಕಡೆಗೆ ಮಾರಾಟಕ್ಕೆ ಹೋಗುತ್ತಿರುವುದಾಗಿ ಚಾಲಕ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Next Story





