ಚಾಮರಾಜನಗರ: ಕೃಷಿ ಹೊಂಡಕ್ಕೆ ಬಿದ್ದು ಸಹೋದರಿಯರು ಮೃತ್ಯು

ಮೃತ ಸಹೋದರಿಯರು
ಚಾಮರಾಜನಗರ: ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ಸಂಭವಿಸಿದೆ.
ಮೃತ ಸಹೋದರಿಯರನ್ನು ಪೂಜಾ (12) ಮತ್ತು ಪುಣ್ಯ (9) ಎಂದು ತಿಳಿದು ಬಂದಿದೆ.
ಮಧ್ಯಾಹ್ನದ ಸಮಯದಲ್ಲಿ ಜಮೀನಿನ ಕೃಷಿ ಹೊಂಡದ ಪಕ್ಕದಲ್ಲೇ ಇದ್ದಂತಹ ಸೀಬೆ ಮರದಲ್ಲಿ ಹಣ್ಣನ್ನು ಕೀಳಲು ಯತ್ನಿಸಿದ ಸಂಧರ್ಭದಲ್ಲಿ ಕಾಲು ಜಾರಿ ಸಹೋದರಿಯಬ್ಬರು ಹೊಂಡಕ್ಕೆ ಜಾರಿ ಬಿದ್ದಿದ್ದಾರೆ ಎಂದು ಹೇಳಲಾಗಿದೆ, ಮಕ್ಕಳು ಹೊರಹೋಗಿ ಬಾರದಿದ್ದ ಹಿನ್ನೆಲೆ ಪೋಷಕರು ಕೃಷಿ ಹೊಂದದ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ, ಇಬ್ಬರು ಮಕ್ಕಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟುವಂತಿದೆ.
ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





