ಮಂಗಳೂರು : ನಿರುದ್ಯೋಗದಿಂದ ಮಾನಸಿಕವಾಗಿ ನೊಂದಿದ್ದ ಇಂಜಿನಿಯರ್ ನಾಪತ್ತೆ

ಮಂಗಳೂರು : ನಗರದ ಬಿಜೈ ನಿವಾಸಿ, ನಿರುದ್ಯೋಗದಿಂದ ಮಾನಸಿಕವಾಗಿ ನೊಂದಿದ್ದ ಇಂಜಿನಿಯರ್ ಪದವೀಧರನೋರ್ವ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಆಯುಷ್ ಉಮೇಶ್ (22) ನಾಪತ್ತೆಯಾದ ಯುವಕ ಎಂದು ತಿಳಿದುಬಂದಿದೆ.
ಈತ ಬಿಇ (ಮೆಕ್ಯಾನಿಕಲ್ ಇಂಜಿನಿಯರಿಂಗ್) ಪದವಿ ಪೂರೈಸಿದ್ದು ಸರಿಯಾದ ಉದ್ಯೋಗ ಸಿಗದೆ ಮಾನಸಿಕವಾಗಿ ನೊಂದಿದ್ದ ಎಂದು ದೂರಲಾಗಿದ್ದು, ಮೇ 2ರಂದು ಬೆಳಗ್ಗೆ 11ಕ್ಕೆ ಮನೆಯಿಂದ ಸ್ಕೂಟರ್‌ನಲ್ಲಿ ತೆರಳಿದ ಇವರು ನಾಪತ್ತೆಯಾಗಿದ್ದಾರೆ ಎಂದು ಉರ್ವ ಪೊಲೀಸರಿಗೆ ದೂರು ನೀಡಲಾಗಿದೆ.
5.7 ಅಡಿ ಎತ್ತರ, ಸಪೂರ ಶರೀರ, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು ಕನ್ನಡಕ ಧರಿಸಿದ್ದಾರೆ. ಮುಖದಲ್ಲಿ ಗಡ್ಡ, ಮೀಸೆ ಇದೆ. ಸುಮಾರು 2 ಇಂಚು ಉದ್ದದ ಕಪ್ಪು ತಲೆ ಕೂದಲು ಹೊಂದಿದ್ದು ಕಪ್ಪು ಬಣ್ಣದ ಟೀ ಶರ್ಟ್, ಕಪ್ಪು ಬಣ್ಣದ ಶಾರ್ಟ್ ಧರಿಸಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಭಾಷೆ ಮಾತನಾಡುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story