ಉದ್ಯಮಿ ಇನಾಯತ್ ಆಲಿ ಕಾರ್ಯವೈಖರಿ ಅಭಿನಂದನೀಯ: ಎಸ್ ಬಿ ದಾರಿಮಿ

ಮುಲ್ಕಿ; ಮುಲ್ಕಿ ಪರಿಸರದಲ್ಲಿ ಕಡುಬಡವರಿಗೆ ಹಾಗೂ ಹಿಂದುಳಿದವರಿಗೆ ಸಹಾಯ ಹಸ್ತದ ಮೂಲಕ ಉತ್ತಮ ವ್ಯಕ್ತಿತ್ವ ಹಾಗೂ ಜನಮನ್ನಣೆಗಳಿಸಿದ ಉದ್ಯಮಿ ಇನಾಯತ್ ಆಲಿ ಕಾರ್ಯವೈಖರಿ ಅಭಿನಂದನೀಯ ಎಂದು ಮುಲ್ಕಿಯ ಕೇಂದ್ರ ಜುಮಾ ಮಸೀದಿಯ ಗುರುಗಳಾದ ಎಸ್ ಬಿ ದಾರಿಮಿ ಹೇಳಿದರು.
ಅವರು ಮುಲ್ಕಿಯ ಕೇಂದ್ರ ಜುಮಾ ಮಸೀದಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಮಸೀದಿಯ ಗೌರವಾಧ್ಯಕ್ಷ ಹಾಗೂ ಉದ್ಯಮಿ, ಕೊಡುಗೈ ದಾನಿ ಇನಾಯತ್ ಆಲಿ ಅವರನ್ನು ಮಸೀದಿ ಆಡಳಿತ ಮಂಡಳಿ ವತಿಯಿಂದ ಗೌರವಿಸಿ ಮಾತನಾಡಿದರು.
ಈ ಸಂದರ್ಭ ಮಸೀದಿಯ ಅಧ್ಯಕ್ಷರಾದ ಲಿಯಾಕತ್ ಆಲಿ ಮಾತನಾಡಿ ಜೀವನದಲ್ಲಿ ತಾವು ಮಾಡಿರುವ ಒಳ್ಳೆ ಕೆಲಸಗಳನ್ನು ಜನ ಗುರುತಿಸಿ ಗೌರವಿಸುತ್ತಾರೆ ಎನ್ನುವುದಕ್ಕೆ ಕಾರ್ಯಕ್ರಮವೇ ಸಾಕ್ಷಿ ಎಂದರು.
ಈ ಸಂದರ್ಭ ಮುಲ್ಕಿ ನಗರ ಪಂಚಾಯತ್ ಸದಸ್ಯ ಪುತ್ತುಬಾವ, ಕಾರ್ನಾಡು ಮಸೀದಿ ಖತೀಬ್ ಇಸ್ಮಾಯಿಲ್ ದಾರಿಮಿ, ಇಕ್ಬಾಲ್ ಮುಲ್ಕಿ, ಎಂ.ಕೆ ಹುಸೈನ್ ಕಾರ್ನಾಡ್, ಫಾರೂಕ್ ಕಾರ್ನಾಡ್, ಅಮಾನ್ ಮುಲ್ಕಿ, ಕೆ.ಎ ಇಬ್ರಾಹಿಂ ಕಾರ್ನಾಡ್ ಮತ್ತಿತರರು ಉಪಸ್ಥಿತರಿದ್ದರು.