ಮಂಗಳೂರು: ಮೇ 14-15ರಂದು ರಾಷ್ಟ್ರ ಮಟ್ಟದ ಚೆಸ್ ಪಂದ್ಯಾಟ

ಮಂಗಳೂರು: ದಕ್ಷಿಣ ಕನ್ನಡ ಚೆಸ್ ಅಸೋಸಿಯೇಶನ್ ವತಿಯಿಂದ ಮೇ 14 ಮತ್ತು 15ರಂದು ರಾಷ್ಟ್ರಮಟ್ಟದ ರ್ಯಾಪಿಡ್ ರೇಟೆಡ್ ಚೆಸ್ ಪಂದ್ಯಾವಳಿ ಪುರಭವನದಲ್ಲಿ ಆಯೋಜಿಸಲಾಗಿದೆ.
ಕರಾವಳಿಯಲ್ಲಿ ಚೆಸ್ ಕ್ರೀಡೆಯನ್ನು ಉತ್ತೇಜಿಸುವ ಸಲುವಾಗಿ 2019ರಲ್ಲಿ ದಕ್ಷಿಣ ಕನ್ನಡ ಚೆಸ್ ಎಸೋಸಿಯೇಶನ್ ಮಂಗಳೂರು ಸಂಸ್ಥೆಯನ್ನು ಸ್ಥಾಪಿಸಿ, ಈಗಾಗಲೇ ಹಲವು ಅಂತರ್ ಜಿಲ್ಲಾ ಮಟ್ಟದ ಮುಕ್ತ ಚೆಸ್ ಪಂದ್ಯಾಟವನ್ನು ನಡೆಸಿದೆ.
ರಾಷ್ಟ್ರ ಮಟ್ಟದ ಈ ಪಂದ್ಯಾವಳಿಯಲ್ಲಿ ಭಾಗವಹಿಸುವವರು www.chessfee.com ಮುಖಾಂತರ ನೋಂದಾಯಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷ ರಮೇಶ್ ಕೋಟೆ ತಿಳಿಸಿದ್ದಾರೆ.
Next Story





