ತುಮಕೂರು: ಕಾರ್‌ಗೆ ಟಿಪ್ಪರ್ ಢಿಕ್ಕಿ; ದಂಪತಿ, ಮಗು ಮೃತ್ಯು

ತುಮಕೂರು: ಕಾರಿಗೆ ಟಿಪ್ಪರ್ ಢಿಕ್ಕಿ ಹೊಡೆದು ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಮಂಗಳವಾರ ಕುಣಿಗಲ್ ತಾಲೂನ ಹುಲಿಯೂರುದುರ್ಗ ಬಳಿ ನಡೆದಿದೆ.
ಮೃತರನ್ನು ಚನ್ನಪಟ್ಟಣದ ಶಾಮಿಯ ಮೊಹಲ್ಲಾದ ಸೈಯದ್ ಮಹಮ್ಮದ್ ನಝ್ಮಿ (42), ಅವರ ಪತ್ನಿ ನಾಝಿಯಾ (35), ಪುತ್ರ ಒಂದು ವರ್ಷದ ಸೈಯದ್ ಕುದ್ಮೀರ್ ಎಂದು ಗುರುತಿಸಲಾಗಿದೆ.
ಮೂರು ವರ್ಷದ ಸೈಯದ್ ಕುಂದನ್ ನಬೀ ತೀವ್ರವಾಗಿ ಗಾಯಗೊಂಡಿದ್ದು, ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
Next Story





