ರಮೇಶ್ ಜಾರಕಿಹೊಳಿ ವಿರುದ್ಧ 600 ಕೋಟಿ ರೂ. ವಂಚನೆ ಆರೋಪ: ಕಾಂಗ್ರೆಸ್ ಟ್ವೀಟ್

ಬೆಂಗಳೂರು: ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು 600 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, '40% ಬಿಜೆಪಿಯ ಹಗರಣಗಳ ಸಾಲಿಗೆ ಮತ್ತೊಂದು ಅಕ್ರಮ ಸೇರ್ಪಡೆಯಾಗಿದೆ. ರಮೇಶ್ ಜಾರಕಿಹೊಳಿಯವರ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಂಪೆನಿ ಹೆಸರಲ್ಲಿ ನಡೆಯುತ್ತಿರುವ 600 ಕೋಟಿ ವಂಚನೆಗೆ ಇಡೀ ಸರ್ಕಾರವೇ ಬೆಂಬಲವಾಗಿ ನಿಂತಿದೆ. ಅವರ ಸಾಲವನ್ನು NPA ಎಂದು ಪರಿಗಣಿಸುವಲ್ಲಿ ರಾಜ್ಯ ಸರ್ಕಾರ ಅಷ್ಟೇ ಅಲ್ಲ ಕೇಂದ್ರ ಸರ್ಕಾರದ ಸಹಬಾಗಿತ್ವವೂ ಇದೆ' ಎಂದು ಆರೋಪಿಸಿದೆ.
'ಚೆಕ್ ಆಯ್ತು, RTGS ಆಯ್ತು, ಕಮಿಷನ್ ಆಯ್ತು, ಈಗ ಭ್ರಷ್ಟಾಚಾರಕ್ಕೆ ಬಿಜೆಪಿ ಕಂಡುಕೊಂಡ ಹೊಸ ಮಾರ್ಗ "ಉದ್ದೇಶಪೂರ್ವಕ ದಿವಾಳಿ ಘೋಷಣೆ" ರಮೇಶ್ ಜಾರಕಿಹೊಳಿ ಮಾಲೀಕತ್ವದ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಹೆಸರಲ್ಲಿ 600 ಕೋಟಿ ಮೊತ್ತವನ್ನು ನುಂಗಿ ನೀರು ಕುಡಿಯಲು ಮುಂದಾಗಿದ್ದಾರೆ. ಸಹಕಾರ ಬ್ಯಾಂಕ್‌ಗಳ ಈ ನಷ್ಟಕ್ಕೆ ಹೊಣೆ ಯಾರು ಸಹಕಾರ ಸಚಿವರೇ?' ಎಂದು ಕಾಂಗ್ರೆಸ್ ಇನ್ನೊಂದು ಟ್ವೀಟ್ ನಲ್ಲಿ ಪ್ರಶ್ನಿಸಿದೆ.
40% ಬಿಜೆಪಿಯ ಹಗರಣಗಳ ಸಾಲಿಗೆ ಮತ್ತೊಂದು ಅಕ್ರಮ ಸೇರ್ಪಡೆಯಾಗಿದೆ.
— Karnataka Congress (@INCKarnataka) May 3, 2022
ರಮೇಶ್ ಜಾರಕಿಹೊಳಿಯವರ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಂಪೆನಿ ಹೆಸರಲ್ಲಿ ನಡೆಯುತ್ತಿರುವ 600 ಕೋಟಿ ವಂಚನೆಗೆ ಇಡೀ ಸರ್ಕಾರವೇ ಬೆಂಬಲವಾಗಿ ನಿಂತಿದೆ.
ಅವರ ಸಾಲವನ್ನು NPA ಎಂದು ಪರಿಗಣಿಸುವಲ್ಲಿ ರಾಜ್ಯ ಸರ್ಕಾರ ಅಷ್ಟೇ ಅಲ್ಲ ಕೇಂದ್ರ ಸರ್ಕಾರದ ಸಹಬಾಗಿತ್ವವೂ ಇದೆ. pic.twitter.com/3pL43FQ4Zs







