ಕಿನ್ನಿಗೋಳಿ: ಉಚಿತ ಆಯುಷ್ಮಾನ್ ಕಾರ್ಡ್, ಇ-ಶ್ರಮ್ ಕಾರ್ಡ್ ವಿತರಣೆ

ಕಿನ್ನಿಗೋಳಿ : ಕಿನ್ನಿಗೋಳಿ ಪಟ್ಟಣ ಪಂಚಾಯತ್, ಶ್ರೀರಾಮ ಯುವಕ ವೃಂದ ಗೋಳಿಜೋರ, ಲಯನ್ಸ್ ಕ್ಲಬ್ ಕಿನ್ನಿಗೋಳಿ, ಹರಿಹರ ಶ್ರೀ ರಾಮ ಭಜನಾ ಮಂದಿರ ಮತ್ತು ಕೋಡ್ದಬ್ಬು ದೈವಸ್ಥಾನ ಗೋಳಿಜೋರ, ರೋಟರಿ ಕ್ಲಬ್ ಕಿನ್ನಿಗೋಳಿ, ಕಂಪ್ಯೂಟರ್ ವರ್ಲ್ಡ್ ಕಿನ್ನಿಗೋಳಿ ಇವರ ಜಂಟಿ ಸಹಯೋಗದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ಮತ್ತು ಇ- ಶ್ರಮ ಕಾರ್ಡ್ ವಿತರಣಾ ಕಾರ್ಯಕ್ರಮವು ಗೋಳಿಜೋರ ಶ್ರೀ ಹರಿಹರ ಶ್ರೀರಾಮ ಭಜನಾ ಮಂದಿರದ ಆವರಣದಲ್ಲಿ ನಡೆಯಿತು.
ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಹಿಲ್ಡಾ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಕಿನ್ನಿಗೋಳಿ ರೋಟರಿಕ್ಲಬ್ ರೊ. ದೇವಿಪ್ರಸಾದ್ ಶೆಟ್ಟಿ, ಹರಿಹರ ಶ್ರೀ ರಾಮ ಭಜನಾ ಮಂದಿರ ಮತ್ತು ಕೋರ್ದಬ್ಬು ದೈವಸ್ಥಾನದ ಅಧ್ಯಕ್ಷ ಚೇತನ್ ಗೋಳಿಜೋರ, ಶ್ರೀರಾಮ ಯುವಕ ವೃಂದದ ಅಧ್ಯಕ್ಷ ಪ್ರಕಾಶ್ ಕಿನ್ನಿಗೋಳಿ, ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಂಕರ್ ಮಾಸ್ಟರ್ ಗೋಳಿಜೋರ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸಿಬ್ಬಂದಿ ಜೀವನ್ ಗೋಳಿಜೋರ, ಉದ್ಯಮಿ ಸ್ಟ್ಯಾನಿ ಡಿಸೋಜ ಗೋಳಿಜೊರ, ಕಿನ್ನಿಗೋಳಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಚಂದ್ರಶೇಖರ ಗೋಳಿಜೋರ, ವೆಂಕಪ್ಪ ಗೋಳಿಜೋರ ಉಪಸ್ಥಿತರಿದ್ದರು.
ಯುವಕ ಸಂಘದ ಅಧ್ಯಕ್ಷ ಪ್ರಕಾಶ್ ಕಿನ್ನಿಗೋಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶ್ರೀಪತಿ ಗೋಳಿಜೋರ ವಂದಿಸಿದರು.