Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಆರ್‌ಬಿಐ ರೆಪೊ ದರ ಶೇ. 4.40 ಏರಿಕೆ: 4...

ಆರ್‌ಬಿಐ ರೆಪೊ ದರ ಶೇ. 4.40 ಏರಿಕೆ: 4 ವರ್ಷಗಳ ಬಳಿಕ ಮೊದಲ ಬಾರಿಗೆ ಹೆಚ್ಚಳ

ಹಣದುಬ್ಬರ ನಿಯಂತ್ರಣ ಉದ್ದೇಶ ಎಂದ ಆರ್‌ಬಿಐ

ವಾರ್ತಾಭಾರತಿವಾರ್ತಾಭಾರತಿ4 May 2022 6:17 PM IST
share
ಆರ್‌ಬಿಐ ರೆಪೊ ದರ ಶೇ. 4.40 ಏರಿಕೆ: 4 ವರ್ಷಗಳ ಬಳಿಕ ಮೊದಲ ಬಾರಿಗೆ ಹೆಚ್ಚಳ

ಹೊಸದಿಲ್ಲಿ, ಎ.14: ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರದಲ್ಲಿ 40 ಮೂಲಾಂಶ (ಬೇಸಿಸ್ ಪಾಯಿಂಟ್) ಹೆಚ್ಚಳ ಮಾಡಿದ್ದು, ಶೇ.4.40ಕ್ಕೆ ನಿಗದಿಪಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನಗದು ಮೀಸಲು ಅನುಪಾತದಲ್ಲಿಯೂ (ಕ್ಯಾಶ್ ರಿಸರ್ವ್ ರೇಶಿಯೋ) 50 ಮೂಲಾಂಶದಷ್ಟು ಏರಿಕೆ ಮಾಡಿದೆ. ಹಣಕಾಸು ನೀತಿ ಸಮಿತಿ (ಎಂಪಿಸಿ)ಯು ಆರ್ಬಿಐನ ಕೇಂದ್ರ ಮಂಡಳಿಯ ಜೊತೆ ಮೇ 2-4ರಂದು ನಡೆಸಿದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಂಡಿದೆ.

ಹೊಸದಿಲ್ಲಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ್ ಘೋಷ್ ರೆಪೊ ದರದಲ್ಲಿ ಏರಿಕೆಯನ್ನು ಘೋಷಿಸಿದರು. ಹೆಚ್ಚುತ್ತಿರುವ ಹಣದುಬ್ಬರ,ಭೌಗೋಳಿಕ-ರಾಜಕೀಯ ಉದ್ವಿಗ್ನತೆ, ಕಚ್ಚಾ ತೈಲ ದರ ಏರಿಕೆ ಹಾಗೂ ಜಾಗತಿವಾಗಿ ಅವಶ್ಯಕ ಸಾಮಾಗ್ರಿಗಳ ಕೊರತೆಯು ಭಾರತೀಯ ಆರ್ಥಿಕತೆಯ ಮೇಲೆ ಪರಿಣಾಮವನ್ನು ಬೀರಿದೆ ಎಂದರು. ಹೆಚ್ಚುತ್ತಿರುವ ಹಣದುಬ್ಬರವನ್ನ ನಿಯಂತ್ರಿಸುವ ಉದ್ದೇಶದಿಂದ ರೆಪೊ ದರದಲ್ಲಿ 40 ಮೂಲಾಂಶದಷ್ಟು ಹೆಚ್ಚಳ ಮಾಡಲಾಗಿದ್ದು, ಶೇ.4.40ಕ್ಕೆ ನಿಗದಿಪಡಿಸಲಾಗಿದೆ ಎಂದರು.

ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಗೋಧಿ ಧಾನ್ಯದ ಕೊರತೆಯು, ದೇಶೀಯ ಗೋಧಿ ದರದ ಮೇಲೂ ಪರಿಣಾಮುನ್ನು ಬೀರಿದೆ. ಇದರಿಂದಾಗಿ ಆಹಾರದ ಹಣದುಬ್ಬರವು ಅಧಿಕಮಟ್ಟದಲ್ಲಿ ಉಳಿದುಕೊಳ್ಳುವ ನಿರೀಕ್ಷೆಯಿದೆಯೆಂದು ಶಕ್ತಿಕಾಂತ್ ದಾಸ್ ತಿಳಿಸಿದರು.ಆದಾಗ್ಯೂ ಜಾಗತಿಕ ಅಸ್ಥಿರತೆಯ ನಡುವೆಯೂ ಭಾರತದ ಆರ್ಥಿಕತೆ ಸ್ಥಿರವಾಗಿದೆ ಎಂದವರು ಹೇಳಿದರು.

ರಶ್ಯ-ಉಕ್ರೇನ್ ಯುದ್ಧದಿಂದಾಗಿ ಖಾದ್ಯ ತೈಲ ಉತ್ಪಾದಿಸುವ ರಾಷ್ಟ್ರಗಳು ಕಠಿಣವಾದ ರಫ್ತು ನಿರ್ಬಂಧಗಳನ್ನು ಹೇರಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಖಾದ್ಯ ತೈಲ ದರಗಳು ಹೆಚ್ಚಳವನ್ನು ಕಂಡಿವೆ ಎಂದವರು ತಿಳಿಸಿದರು.

ಇದರ ಜೊತೆಗೆ ನಗದು ಮೀಸಲು ಅನುಪಾತ (ಸಿಆರ್ಎರ್)ವನ್ನು 50 ಮೂಲಾಂಶ ಹೆಚ್ಚಿಸಲಾಗಿದ್ದು ಶೇ.4.5ಕ್ಕೆ ನಿಗದಿಪಡಿಸಲಾಗಿದೆ. ಸಿಆರ್ಆರ್ ಹೆಚ್ಚಳದಿಂದಾಗಿ ನಗದು ಹಿಂತೆಗೆದುಕೊಳ್ಳುವಿಕೆಯು87 ಸಾವಿರ ಕೋಟಿ ರೂ. ಆಗಲಿದೆ. ಇದು ಮೇ 21ರಿಂದ ಜಾರಿಗೆ ಬರಲಿದೆ ಎಂದವರು ಹೇಳಿದರು.
ಹಣದುಬ್ಬರ ಏರಿಕೆಯನ್ನು ನಿಯಂತ್ರಿಸಲು ಹಾಗೂ ಹಣದುಬ್ಬರದ ನಿರೀಕ್ಷಿತ ಹೆಚ್ಚಳವನ್ನು ಮರುಪರಿಷ್ಕರಿಸುವುದೇ ಈ ವಿತ್ತೀಯ ಕ್ರಮಗಳ ಉದ್ದೇಶವಾಗಿದೆಯೆಂದು ದಾಸ್ ತಿಳಿಸಿದರು.

ರಶ್ಯ-ಉಕ್ರೇನ್ ಯುದ್ಧದ ಆರ್ಥಿಕ ಪರಿಣಾಮಗಳು ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿವೆ. ಸರಕು ಹಾಗೂ ವಿತ್ತೀಯ ಮಾರುಕಟ್ಟೆಗಳಲ್ಲಿ ಕೊರತೆ ಹಾಗೂ ಚಂಚಲತೆ ಅಧಿಕವಾಗುತ್ತಿದೆ. ಇವೆಲ್ಲದರ ನಡುವೆಯೂ ಭಾರತವು ಆರ್ಥಿಕ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಿದೆ ಎಂದವರು ಹೇಳಿದರು.
ದಿನಗಳೆದಂತೆ ದೇಶದಲ್ಲಿ ಹಣದುಬ್ಬರದ ಒತ್ತಡವು ಹೆಚ್ಚು ತೀವ್ರವಾಗಿ ಹರಡುತ್ತಿದೆ ಹಾಗೂ ನಿರಂತರವಾಗುತ್ತಿದೆ ಎಂದರು.
2018ರ ಆಗಸ್ಟ್ನಿಂದೀಚೆಗೆ ರೆಪೊ ದರದಲ್ಲಿ ಮಾಡಲಾದ ಪ್ರಥಮ ಏರಿಕೆ ಇದಾಗಿದೆ. ರೆಪೊ ಏರಿಕೆಯಿಂದಾಗಿ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಬ್ಯಾಂಕುಗಳಿಂದ ಪಡೆಯುವ ಸಾಲದ ಬಡ್ಡಿದರದಲ್ಲಿ ಹೆಚ್ಚಳವಾಗಲಿದೆ.

ಏನಿದು ರೆಪೊ ದರ? 
ರೆಪೊ ದರವು ಭಾರತೀಯ ರಿಸರ್ವ್ ಬ್ಯಾಂಕ್ ಇತರ ಬ್ಯಾಂಕುಗಳಿಗೆ ನೀಡುವ ಸಾಲದ ದರವಾಗಿದೆ. ಈ ಸಾಲದ ಆಧಾರದಲ್ಲಿ ಬ್ಯಾಂಕುಗಳು ಗ್ರಾಹಕರಿಗೆ ಸಾಲದ ಬಡ್ಡಿದರವನ್ನು ನಿರ್ಧರಿಸುತ್ತವೆೆ. ಕಡಿಮೆಯಾದ ರೆಪೊ ದರ ಎಂದರೆ ಗೃಹ ಸಾಲಗಳು, ವಾಹನ ಸಾಲಗಳು ಮುಂತಾದ ಬ್ಯಾಂಕಿನಿಂದ ಅನೇಕ ರೀತಿಯ ಸಾಲಗಳು ಬಡ್ಡಿದರ ಅಗ್ಗವಾಗುತ್ತವೆ. ರೆಪೊ ದರ ಹೆಚ್ಚಳವಾದಲ್ಲಿ ಸಾಲದ ಬಡ್ಡಿದರ ಅಧಿಕವಾಗುತ್ತದೆ.

ರಿವರ್ಸ್ ರೆಪೊ ದರ 
ಬ್ಯಾಂಕುಗಳು ತಾವು ಆರ್ಬಿಐನಲ್ಲಿ ಠೇವಣಿ ಇರಿಸಿದ ಹಣಕ್ಕೆ ಬಡ್ಡಿಯನ್ನು ಪಡೆಯುವ ದರ ಇದು. ಮಾರುಕಟ್ಟೆಗಳಲ್ಲಿ ಹಣದ ದ್ರವ್ಯತೆಯನ್ನು ನಿಯಂತ್ರಿಸಲು ರಿವರ್ಸ್ ರೆಪೊ ದರವನ್ನು ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ ಹೆಚ್ಚು ಹಣವಿದ್ದಾಗಲೆಲ್ಲಾ, ಆರ್ಬಿಐ ರಿವರ್ಸ್ ರೆಪೊ ದರವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಹೆಚ್ಚಿನ ಬಡ್ಡಿ ಗಳಿಸಲು ಬ್ಯಾಂಕ್ಗಳು ತನ್ನ ಹಣವನ್ನು ಅದರೊಂದಿಗೆ ಠೇವಣಿ ಮಾಡುತ್ತದೆ

ಸಿಆರ್ಆರ್ 
ಬ್ಯಾಂಕಿಂಗ್ ನಿಯಮಗಳ ಪ್ರಕಾರ, ಪ್ರತಿ ಬ್ಯಾಂಕ್ ತನ್ನ ಒಟ್ಟು ಹಣದ ಒಂದು ನಿರ್ದಿಷ್ಟ ಭಾಗವನ್ನು ರಿಸರ್ವ್ ಬ್ಯಾಂಕಿನಲ್ಲಿ ಇಟ್ಟುಕೊಳ್ಳಬೇಕು. ಇದನ್ನು ನಗದು ಮೀಸಲು ಅನುಪಾತ (ಸಿಆರ್ಆರ್) ಎಂದು ಕರೆಯಲಾಗುತ್ತದೆ..

share
ವಾರ್ತಾಭಾರತಿ
ವಾರ್ತಾಭಾರತಿ
Next Story
X