ಮುಲ್ಕಿ: ಆಟೋ ರಿಕ್ಷಾ ಪಲ್ಟಿ; ಪಾದಚಾರಿ ಸಹಿತ ನಾಲ್ವರಿಗೆ ಗಾಯ

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ವಿಜಯ ಸನ್ನಿಧಿ ಬಳಿ ಅಪಘಾತ ತಪ್ಪಿಸಲು ಯತ್ನಿಸಿ ಆಟೋ ಹೆದ್ದಾರಿ ಬದಿಯ ದಾರಿದೀಪಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಪಾದಚಾರಿ ಸಹಿತ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಗೊಂಡವರನ್ನು ಮುಲ್ಕಿ ಸಮೀಪದ ಮಿಷನ್ ಕಂಪೌಂಡ್ ಬಳಿಯ ನಿವಾಸಿ ಭಾಸ್ಕರ ಶೆಟ್ಟಿ, ಆಟೋ ಚಾಲಕ ಕೋಲ್ನಾಡ್ ನಿವಾಸಿ ಇಬ್ರಾಹಿಂ ಹಾಗೂ ಆಟೋದಲ್ಲಿದ್ದ ಕಾಪು ಪಕೀರನ ಕಟ್ಟೆ ನಿವಾಸಿ ಗಳಾದ ತಸ್ಲಿಂ, ಅವಮ್ಮ, ಅನ್ವರ್, ಸಾಝ್, ಆಸಿಯಾ ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಕೊಲ್ನಾಡು ಕಡೆಯಿಂದ ಬರುತ್ತಿದ್ದ ಆಟೋಗೆ ಮುಲ್ಕಿ ವಿಜಯ ಸನ್ನಿಧಿ ಬಳಿ ಏಕಾಏಕಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಪಾದಚಾರಿ ಭಾಸ್ಕರ್ ಶೆಟ್ಟಿ ಜೊತೆ ಅಪಘಾತ ತಪ್ಪಿಸಲು ಯತ್ನಿಸಿ ಹೆದ್ದಾರಿ ದಾರಿ ದೀಪಕ್ಕೆ ಢಿಕ್ಕಿಯಾಗಿ ಆಟೋ ಪಲ್ಟಿಯಾಗಿದೆ.
ಅಪಘಾತದಿಂದ ಕೆಲಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಕೂಡಲೇ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಚಾರ ಸುಗಮಗೊಳಿಸಿದ್ದಾರೆ.
Next Story