*ಈದುಲ್ ಫಿತ್ರ್ ಪ್ರಯುಕ್ತ ಯುನಿವೆಫ್ ಕರ್ನಾಟಕದಿಂದ ಸರ್ವಧರ್ಮೀಯ ಪ್ರಮುಖರ ಭೇಟಿ

ಮಂಗಳೂರು : ಈದುಲ್ ಫಿತ್ರ್ (ರಮಝಾನ್ ಹಬ್ಬ) ಪ್ರಯುಕ್ತ ಯುನಿವೆಫ್ ಕರ್ನಾಟಕದ ನಿಯೋಗವು ಸಹಬಾಳ್ವೆಯ ಸಂದೇಶದ ಜತೆ ವಿವಿಧ ಧರ್ಮೀಯ ಮುಖಂಡರ ಹಾಗು ಪೋಲೀಸ್ ಅಧಿಕಾರಿಗಳ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.
ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಪಿಎ ಹೆಗಡೆ, ಮಂಗಳೂರು ಉತ್ತರ ಠಾಣೆಯ ಇನ್‌ಸ್ಪೆಕ್ಟರ್ ರಾಘವೇಂದ್ರ ಬೈಂದೂರು, ದಕ್ಷಿಣ ಠಾಣೆಯ ಇನ್‌ಸ್ಪೆಕ್ಟರ್ ಮಂಜನಾಥ್, ಕದ್ರಿ ಠಾಣೆಯ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ, ಉರ್ವ ಠಾಣೆಯ ಎಸ್ಸೈ ಹರೀಶ್ ಬಿ. ಕೆ., ಬೋಳೂರಿನ ಮೊಗವೀರ ಮಹಾಸಭಾದ ಉಪಾಧ್ಯಕ್ಷ ದೇವದಾಸ ಬೋಳೂರು, ವೈದ್ಯ ಡಾ. ಸುಧೀರ್ ನಾಯಕ್, ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿನ ಬಾಲಕೃಷ್ಣ ಮತ್ತಿತರರನ್ನು ಭೇಟಿ ಮಾಡಿತು.
ಈ ಸಂದರ್ಭ ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಕಾರ್ಯದರ್ಶಿ ಮುಹಮ್ಮದ್ ಸೈಫುದ್ದೀನ್, ಮಂಗಳೂರು ಶಾಖೆಯ ಅಧ್ಯಕ್ಷ ತಾಯಿಫ್ ಅಹ್ನದ್, ಉಳ್ಳಾಲ ಶಾಖೆಯ ಮಾಜಿ ಅಧ್ಯಕ್ಷ ಸರ್ಫರಾಝ್ ನವಾಝ್, ಕುದ್ರೋಳಿ ಶಾಖೆಯ ಕಾರ್ಯದರ್ಶಿ ಸಈದ್ ಅಹ್ಮದ್, ಕುದ್ರೋಳಿ ಶಾಖೆಯ ಸದಸ್ಯ ಮುಹಮ್ಮದ್ ಆಸಿಫ್ ಫಿಶ್ ಝೋನ್, ಕುದ್ರೋಳಿ ಶಾಖೆಯ ಸದಸ್ಯ ಕೋಯ ಅಬೂಬಕರ್, ಕಾರ್ಯಕ್ರಮದ ಸಂಚಾಲಕ ಹುದೈಫ್ ಕುದ್ರೋಳಿ ಹಾಜರಿದ್ದರು.





