ಚಾಮರಾಜನಗರ | ಕರ್ತವ್ಯ ಲೋಪ ಆರೋಪ: ನಗರಸಭೆ ಕಂದಾಯ ಅಧಿಕಾರಿ ಅಮಾನತು

ಚಾಮರಾಜನಗರ: ಕರ್ತವ್ಯ ಲೋಪ ಆರೋಪ ಹಿನ್ನೆಲೆಯಲ್ಲಿ ಚಾಮರಾಜನಗರದ ನಗರಸಭೆ ಕಂದಾಯ ಅಧಿಕಾರಿಯನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ.
ಜಯಶೀಲ ಅಮಾನತಾದ ಅಧಿಕಾರಿ. ಸಾರ್ವಜನಿಕರಿಗೆ ಇ-ಆಸ್ತಿ ಮತ್ತು ಹಕ್ಕು ಬದಲಾವಣೆ ಸೇವೆ ವಿಳಂಬ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಯಶೀಲ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.
ದೂರಿನ ಮೇರೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತನಿಖೆ ನಡೆಸಿದ್ದರು. ಈ ವೇಳೆ 1192 ಅರ್ಜಿಗಳಿಗೆ ಸೇವೆ ನೀಡದೆ ಕರ್ತವ್ಯ ಲೋಪ ಎಸಗಿರುವ ಆರೋಪ ಸಾಬೀತಾಗಿದೆ ಎಂದು ತಿಳಿದು ಬಂದಿದೆ.
ಸಕಾಲ ತಂತ್ರಾಂಶದಲ್ಲಿ ಸೇವೆ ನೀಡಲಾಗಿದೆ ಎಂದು ಆನ್ಲೈನ್ ತಂತ್ರಾಂಶದಲ್ಲಿ ಸುಳ್ಳು ಮಾಹಿತಿ ನೀಡಿರುವುದು ತನಿಖೆಯಿಂದ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಜಯಶೀಲ ಅವರನ್ನು ಅಮಾನತು ಮಾಡಲಾಗಿದೆ.
Next Story





