ಪ್ರೆಸ್ ಕ್ಲಬ್ ಗಳಿಂದ ‘ಪ್ರಜಾಪ್ರಭುತ್ವ ವಿರೋಧಿ’ನಿಷೇಧ ಹೇರಲಾಗಿದೆ :‘ದಿ ಕಾಶ್ಮೀರ ಫೈಲ್ಸ್’ ನಿರ್ದೇಶಕರ ಆರೋಪ

PTI
ಹೊಸದಿಲ್ಲಿ,ಮೇ 4: ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ (ಎಫ್ಸಿಸಿ) ಮತ್ತು ಪ್ರೆಸ್ ಕ್ಲಬ್ ಇಂಡಿಯಾ (ಪಿಸಿಐ)ದಿಂದ ತಿರಸ್ಕರಿಸಲ್ಪಟ್ಟಿರುವ,‘ದಿ ಕಾಶ್ಮೀರ ಫೈಲ್ಸ್’ನ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯವರು ತನ್ನ ವಿರುದ್ಧ ‘ಪ್ರಜಾಫ್ರಭುತ್ವ ವಿರೋಧಿ’ ನಿಷೇಧವನ್ನು ಹೇರಲಾಗಿದೆ ಮತ್ತು ತಾನು ಗುರುವಾರ ಪಂಚತಾರಾ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸುವುದಾಗಿ ಹೇಳಿದ್ದಾರೆ.
ಎಫ್ಸಿಸಿ ತನ್ನ ಕಾರ್ಯಕ್ರಮವನ್ನು ರದ್ದುಗೊಳಿಸುವುದರೊಂದಿಗೆ ತನ್ನ ಮುಕ್ತ ಅಭಿವ್ಯಕ್ತಿಯನ್ನು ‘ಮುಕ್ತ ಅಭಿವ್ಯಕ್ತಿಯ ಪ್ರತಿಪಾದಕರು ’ ನಿಷೇಧಿಸಿದ್ದಾರೆ ಎಂದು ಮಂಗಳವಾರ ವೀಡಿಯೊ ಸಂದೇಶದಲ್ಲಿ ಆರೋಪಿಸಿದ್ದ ಅಗ್ನಿಹೋತ್ರಿ,ಬದಲಿಗೆ ಮಾಧ್ಯಮಗಳೊಂದಿಗೆ ತನ್ನ ಸಂವಾದ ಕಾರ್ಯಕ್ರಮವನ್ನು ಪಿಸಿಐನಲ್ಲಿ ನಡೆಸುವುದಾಗಿ ಪ್ರಕಟಿಸಿದ್ದರು. ಆದರೆ ಪಿಸಿಐ ಅನುಮತಿಯನ್ನು ನಿರಾಕರಿಸಿದ್ದು,ಬುಧವಾರ ಇವೆರಡು ಸಂಸ್ಥೆಗಳನ್ನು ಟೀಕಿಸಿ ಅಗ್ನಿಹೋತ್ರಿ ಟ್ವೀಟಿಸಿದ್ದಾರೆ.
ಗುರುವಾರ ಅಪರಾಹ್ನ 3:30ಕ್ಕೆ ದಿಲ್ಲಿಯ ಲೀ ಮೆರಿಡಿಯನ್ ಹೋಟೆಲ್ನಲ್ಲಿ ಮುಕ್ತ ಸುದ್ದಿಗೋಷ್ಠಿಯನ್ನು ನಡೆಸುವುದಾಗಿ ಮತ್ತು ಕಠಿಣಾತಿಕಠಿಣ ಪ್ರಶ್ನೆಗಳಿಗೆ ಉತ್ತರಿಸುವುದಾಗಿ ಟ್ವೀಟ್ನಲ್ಲಿ ಅವರು ಪ್ರಕಟಿಸಿದ್ದಾರೆ.
Wow! @PCITweets also cancelled me. The watchdogs of democracy and messiah of free speech not only banned me undemocratically but are also lying through their teeth.
— Vivek Ranjan Agnihotri (@vivekagnihotri) May 4, 2022
1. Encl are the facts.
2. They have booked earlier through our agency without any member’s recco. Receipt encl. https://t.co/APRzRlYR18 pic.twitter.com/BQTcY1SXUs