ಗುರುಗ್ರಾಮ: ಯುವತಿಯ ಮೇಲೆ ಅತ್ಯಾಚಾರ, ಚೂರಿಯಿಂದ ಇರಿತ

ಗುರುಗ್ರಾಮ,ಮೇ 5: ಇಬ್ಬರು ದುಷ್ಕರ್ಮಿಗಳು 24ರ ಹರೆಯದ ಯುವತಿಯ ಮೇಲೆ ಅತ್ಯಾಚಾರವೆಸಗಿ,ಆಕೆಯನ್ನು ಚೂರಿಯಿಂದ ಇರಿದಿರುವ ಘಟನೆ ಹರ್ಯಾಣದ ಗುರುಗ್ರಾಮದ ಡಿಎಲ್ಎಫ್ ಫೇಸ್ 3 ಪ್ರದೇಶದಲ್ಲಿ ನಡೆದಿದೆ.ಆಟೊ ಚಾಲಕನಾಗಿರುವ ಮಹಿಳೆಯ ಪತಿಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು,ಆರೋಪಿಗಳ ಪೈಕಿ ಬಿಹಾರ ಮೂಲದ ಅನಿಲ್ ಠಾಕೂರ್ ಎಂಬಾತನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು,ನಗರದ ಸರಕಾರಿ ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ಆಕೆಯನ್ನು ದಿಲ್ಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story





