ಇತಿಹಾಸಕಾರ ಸಂಪತ್ ವಿರುದ್ಧದ ಟ್ವೀಟ್ಗಳನ್ನು ತೆಗೆಯಲು ಮತ್ತೆ ದಿಲ್ಲಿ ಹೈಕೋರ್ಟ್ ಸೂಚನೆ

ಹೊಸದಿಲ್ಲಿ,ಮೇ 4: ಅಮೆರಿಕದ ವಿದ್ವಾಂಸೆ ಹಾಗೂ ಇತಿಹಾಸಕಾರರಾಗಿರುವ ಆಡ್ರಿ ಟ್ರಷ್ಕೆಯವರು ಭಾರತೀಯ ಇತಿಹಾಸಕಾರ ವಿಕ್ರಂ ಸಂಪತ್ ವಿರುದ್ಧ ಪೋಸ್ಟ್ ಮಾಡಿರುವ ಐದು ಅವಮಾನಕಾರಿ ಟ್ವೀಟ್ಗಳನ್ನು ತೆಗೆಯುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಟ್ವಿಟರ್ಗೆ ಮತ್ತೊಮ್ಮೆ ಸೂಚಿಸಿದೆ.
ಸಂಪತ್ ವಿರುದ್ಧ ಅವಮಾನಕಾರಿ ಟ್ವೀಟ್ಗಳನ್ನು ಪೋಸ್ಟ್ ಮಾಡದಂತೆ ನ್ಯಾಯಾಲಯವು ಫೆ.18ರಂದು ಟ್ರಷ್ಕೆ ಸೇರಿದಂತೆ ಮೂವರು ವಿದ್ವಾಂಸರನ್ನು ನಿರ್ಬಂಧಿಸಿತ್ತು. ಟ್ರಷ್ಕೆಯವರ ಐದು ಟ್ವೀಟ್ಗಳನ್ನು ತೆಗೆಯುವಂತೆ ಅದು ಫೆ.24ರಂದು ಟ್ವಿಟರ್ಗೆ ಸೂಚಿಸಿತ್ತು.
ಸಂಪತ್ ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ ಸಾವರ್ಕರ್ ಕುರಿತು ತನ್ನ ಬರಹಗಳಲ್ಲಿ ಕೃತಿಚೌರ್ಯ ಮಾಡಲಾದ ವಿಷಯವನ್ನು ಸೇರಿಸಿದ್ದಾರೆ ಎಂದು ಟ್ರಷ್ಕೆ ಆರೋಪಿಸಿದ್ದರು. ಅವರ ವಿರುದ್ಧ ಸಂಪತ್ ಮಾನಹಾನಿ ಪ್ರಕರಣವನ್ನು ದಾಖಲಿಸಿದ್ದರು.
Next Story