ಚೀನಾದಲ್ಲಿ ನಡೆಯಬೇಕಿದ್ದ ಏಷ್ಯನ್ ಗೇಮ್ಸ್ 2022 ಮುಂದೂಡಿಕೆ: ವರದಿ

Photo:twitter
ಬೀಜಿಂಗ್: ಈ ವರ್ಷದ ಸೆಪ್ಟೆಂಬರ್ನಲ್ಲಿ ಚೀನಾದ ಹ್ಯಾಂಗ್ಝೌನಲ್ಲಿ ನಿಗದಿಯಾಗಿದ್ದ ಏಷ್ಯನ್ ಕ್ರೀಡಾಕೂಟವನ್ನು ಅನಿರ್ದಿಷ್ಟ ದಿನಾಂಕದವರೆಗೆ ಮುಂದೂಡಲಾಗಿದೆ ಎಂದು ಏಷ್ಯಾದ ಒಲಿಂಪಿಕ್ಸ್ ಕೌನ್ಸಿಲ್ ಅನ್ನು ಉಲ್ಲೇಖಿಸಿ ಚೀನಾದ ಸರಕಾರಿ ಮಾಧ್ಯಮ ಶುಕ್ರವಾರ ವರದಿ ಮಾಡಿದೆ.
ಏಷ್ಯನ್ ಗೇಮ್ಸ್ ವಿಳಂಬಕ್ಕೆ ಯಾವುದೇ ಕಾರಣವನ್ನು ನೀಡಲಾಗಿಲ್ಲ. ಆದರೆ ಕೋವಿಡ್ ಪ್ರಕರಣಗಳ ನಿಯಂತ್ರಿಸಲು ಚೀನಾ ಪರದಾಡುತ್ತಿರುವಾಗ ಈ ಪ್ರಕಟಣೆ ಬಂದಿದೆ.
Next Story