ಕುದ್ರೋಳಿ ಜೂನಿಯರ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ಈದ್ ಕಿಟ್ ವಿತರಣೆ
ಮಂಗಳೂರು : ಕುದ್ರೋಳಿ ಜೂನಿಯರ್ ಫ್ರೆಂಡ್ಸ್ ಸರ್ಕಲ್ ಇದರ ವತಿಯಿಂದ ಬಡ ಅರ್ಹ ಕುಟುಂಬಗಳಿಗೆ ಈದ್ ಕಿಟ್ ವಿತರಣಾ ಕಾರ್ಯಕ್ರಮವನ್ನು ಇತ್ತೀಚಿಗೆ ಆಯೋಜಿಸಲಾಗಿತ್ತು.
ಈ ವೇಳೆ ಕುದ್ರೋಳಿ ಆಸುಪಾಸಿನ 225 ಕುಟುಂಬಗಳಿಗೆ 1.80 ಲಕ್ಷ ರೂ. ವೆಚ್ಚದಲ್ಲಿ ಈದ್ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಡುಪಳ್ಳಿ ಜುಮಾ ಮಸ್ಜಿದ್ ಖತೀಬ್ ರಿಯಾಝ್ ಫೈಝಿ ದುವಾ ನೆರವೇರಿಸಿದರು. ಕುದ್ರೋಳಿ ಜೂನಿಯರ್ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ನೌಶಿಲ್ ಕುದ್ರೋಳಿ ಅಧ್ಯಕ್ಷತೆ ವಹಿಸಿದ್ದರು.
ಕುದ್ರೋಳಿ ವಾರ್ಡ್ ಕಾರ್ಪೊರೇಟರ್ ಶಂಸುದ್ದೀನ್ ಎಚ್.ಬಿ.ಟಿ, ಮಾಜಿ ಕಾರ್ಪೊರೇಟರ್ ಅಬ್ದುಲ್ ಅಝೀಝ್ ಕುದ್ರೋಳಿ, ಉದ್ಯಮಿ ಮುಸ್ತಫಾ ಕೆ.ಎಂ.ಆರ್., ಮುನೀರ್ ಮುನ್ನ, ಉದ್ಯಮಿ ನಝೀರ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅರಿಫ್ ಕುದ್ರೋಳಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
Next Story