ಸಂತ ಅಲೋಶಿಯಸ್ ಕಾಲೇಜಿನ ಸಾಂಸ್ಕೃತಿಕ ವಾರ್ಷಿಕ ಹಬ್ಬ ಉದ್ಘಾಟನೆ
ಮಂಗಳೂರು : ನಗರದ ಸಂತ ಅಲೋಶಿಯಸ್ ಕಾಲೇಜಿನ ಸಾಂಸ್ಕೃತಿಕ ಅಂತರ ಕಾಲೇಜು ವಾರ್ಷಿಕ ಹಬ್ಬ ಇಂದು ಉದ್ಘಾಟನೆಗೊಂಡಿತು.
ಉದ್ಘಾಟನೆಯನ್ನು ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಸಿನೆಮಾ ನಟ ಜ್ಯೋತಿಷ್ ಶೆಟ್ಟಿ ನೇರವೇರಿಸಿ ಮಾತನಾಡುತ್ತಾ, ತಮ್ಮ ಕಾಲೇಜಿನ ದಿನಗಳನ್ನು ನೆನಪಿಸಿಕೊಂಡರು.
ಕಾಲೇಜಿನ ಪ್ರಾಂಶುಪಾಲರಾದ ವಂ. ಪ್ರವೀಣ್ ಮಾರ್ಟಿಸ್ ಮಾತನಾಡಿ, ಅಲೋಶಿಯಸ್ ಕಾಲೇಜಿನಲ್ಲಿ ವಾರ್ಷಿಕ ಅಂತರ್ ಕಾಲೇಜು ಹಬ್ಬಕ್ಕೆ ಮಹತ್ವವನ್ನು ನೀಡಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷ ಕೂಡಾ ಅನೇಕ ಸ್ಪರ್ಧೆಗಳೊಂದಿಗೆ ಅಂತರ ಕಾಲೇಜು ಹಬ್ಬವನ್ನು ಆಚರಿಸಲಾಗುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ವಂ. ಮೆಲ್ವಿನ್ ಪಿಂಟೋ ವಹಿಸಿದ್ದರು. ವಾರ್ಷಿಕ ಹಬ್ಬದ ಸಂಯೋಜಕ ಡಾ. ಹೇಮಚಂದ್ರ ಸ್ವಾಗತಿಸಿದರು. ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ವಿಜೋಯ್ ಅಶ್ವಿನ್ ಕಾರ್ಡೋಜ ವಂದಿಸಿದರು. ಸಹ ಸಂಯೋಜಕ ಡಾ. ಮ್ಯಾನುವಲ್ ತಾವ್ರೊ, ವಿದ್ಯಾರ್ಥಿ ಚಟುವಟಿಕೆ ಕೋಶದ ಡೀನ್ ಡಾ. ಈಶ್ವರ ಭಟ್, ರಿಜಿಸ್ಟ್ರಾರ್ ಡಾ. ಆಲ್ವಿನ್ ಡೇಸಾ, ಹಣಕಾಸು ಅಧಿಕಾರಿ ವಂ. ವಿನ್ಸೆಂಟ್ ಪಿಂಟೋ, ವಿವಿದ ವಿಭಾಗಗಲ ನಿರ್ದೇಶಕರು, ವಿದ್ಯಾರ್ಥಿ ಕೌನ್ಸಿಲ್ ನಿರ್ದೇಶಕ ಅನೂಪ್ ವೇಗಸ್ ಮತ್ತು ಸ್ಟೂಡೆಂಟ್ ಕೌನ್ಸಿಲ್ ಸಾಂಸ್ಕೃತಿಕ ಚಟುವಟಿಕೆ ಕಾರ್ಯದರ್ಶಿ ಲಿಯೋನಾ ಅಲಿಸನ್ ಡಿಸೋಜಾ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಹಬ್ಬದಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನೂ ಆಯೋಜಿಸಲಾಗಿತ್ತು.