ಉಡುಪಿ: 9ಕ್ಕೆ ವಿಶ್ವ ರೆಡ್‌ಕ್ರಾಸ್ ದಿನಾಚರಣೆ
ಉಡುಪಿ : ರೆಡ್‌ಕ್ರಾಸ್ ಸಂಸ್ಥೆಯ ಸಂಸ್ಥಾಪಕರಾದ ಸರ್ ಜೀನ್ ಹೆನ್ರಿ ಡ್ಯುನಾಂಟ್‌ರ ಹುಟ್ಟುಹಬ್ಬವನ್ನು ದೇಶದಾ ದ್ಯಂತ ವಿಶ್ವ ರೆಡ್‌ಕ್ರಾಸ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಅದೇ ರೀತಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕವು ತನ್ನ ೨೧ನೇ ವರ್ಷಾಚರಣೆ ಜೊತೆಗೆ ಶತಮಾ ನೋತ್ಸವ ಆಚರಣೆ- ವಿಶ್ವ ರೆಡ್‌ಕ್ರಾಸ್ ದಿನಾಚರಣೆಯನ್ನು ಮೇ ೯ರಂದು ಬೆಳಗ್ಗೆ ೧೦ಕ್ಕೆ ಅಜ್ಜರಕಾಡಿನ ರೆಡ್‌ಕ್ರಾಸ್ ಭವನದಲ್ಲಿ ಆಚರಿಸಲಿದೆ.
ಜಿಲ್ಲೆಯ ಉಸ್ತುವಾರಿ ಸಚಿವರೂ, ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡ ಜಲಸಾರಿಗೆ ಸಚಿವರೂ ಆಗಿರುವ ಎಸ್.ಅಂಗಾರ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಕೆ.ರಘುಪತಿ ಭಟ್, ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಭಾಗವಹಿಸುವರು. ಅಧ್ಯಕ್ಷತೆಯನ್ನು ರೆಡ್‌ಕ್ರಾಸ್ ಉಡುಪಿ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ವಹಿಸುವರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಾದ ಡಾ.ವಿಜಯ ಬಲ್ಲಾಳ್ (ಸಮಾಜಸೇವೆ), ಡಾ.ಗಣನಾಥ್ ಎಕ್ಕಾರು (ಶೈಕ್ಷಣಿಕ), ಭುಜಂಗ ಶೆಟ್ಟಿ (ಕೃಷಿ), ಮುರಳಿ ಕಡೆಕಾರ್ (ಯಕ್ಷಗಾನ) ಶರಾವತಿ ಯು. ಆರ್ (ಸ್ವಉದ್ಯೋಗ), ಮಾಧವಿ ಭಂಡಾರಿ (ಲೇಖಕಿ), ಹೆಚ್ ಸುಧಾಕರ್ ಶೆಟ್ಟಿ (ಅನಿವಾಸಿ ಭಾರತೀಯ) ಇವರನ್ನು ಶತಮಾನೋತ್ಸವ ಪ್ರಶಸ್ತಿ, ಪೇಟ, ಶಾಲು, ಸ್ಮರಣಿಕೆ ಮತ್ತು ಫಲಪುಷ್ಪಗಳನ್ನು ನೀಡಿ ಸನ್ಮಾನಿಸಲಾಗುವುದು.
ಅಲ್ಲದೆ ಕೋವಿಡ್‌ನಿಂದ ನೊಂದ ಬಡ ಕುಟುಂಬದ ಫಲಾನುಭವಿಗಳಿಗೆ ಪುನರ್ವಸತಿ ಕಲ್ಪಿಸಲು ಹೊಲಿಗೆ ಮೆಶಿನ್, ವಿಕಲಚೇತನ ಫಲಾನುಭವಿಗಳಿಗೆ ಸಾಧನ ಸಲಕರಣೆ ಮತ್ತು ವಿವಿಧ ಇಲಾಖೆಗಳಿಗೆ ಮಾಸ್ಕ್‌ಗಳನ್ನು ವಿತರಿಸಲಾಗುವುದು ಎಂದು ರೆಡ್‌ಕ್ರಾಸ್‌ನ ಪ್ರಕಟಣೆ ತಿಳಿಸಿದೆ.