ಅಲ್ ಬಿರ್ರ್ ಇಸ್ತಿಖಾಮ ಕುರ್ ಆನ್ ಪಠಣ ಸ್ಪರ್ಧೆ; ಫಾತಿಮಾ ಝಹ್ರಾ ರಾಜ್ಯಮಟ್ಟಕ್ಕೆ ಆಯ್ಕೆ

ಮಂಗಳೂರು: ಕೇರಳ ಹಾಗೂ ಕರ್ನಾಟಕದ ಅಲ್ ಬಿರ್ರ್ ಸ್ಕೂಲ್ ವಿದ್ಯಾರ್ಥಿಗಳಿಗಾಗಿ ರಮಝಾನ್ ನಲ್ಲಿ ಆಯೋಜಿಸಿದ -ಇಸ್ತಿಖಾಮ ಕುರ್ ಆನ್ ಪಠಣ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಕೈಕಂಬ ಅಲ್ ಬಿರ್ ಸ್ಕೂಲ್ ಇದರ ಒಂದನೇ ತರಗತಿಯ ವಿದ್ಯಾರ್ಥಿನಿ ಫಾತಿಮತ್ ಝಹ್ರಾ ಸತತ ಮೂರನೇ ವರ್ಷವು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ದ.ಕ. ಜಿಲ್ಲೆ ಹಾಗೂ ಕೇರಳದ ಕಣ್ಣೂರು ಜಿಲ್ಲೆಯನ್ನೊಳಗೊಂಡ ವಲಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಆಕೆ ವಿಜೇತರಾಗುವ ಮೂಲಕ ಇದೀಗ ಕೇರಳ-ಕರ್ನಾಟಕ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾಳೆ.
ಕಳೆದೆರಡು ವರ್ಷಗಳಲ್ಲಿ ನಡೆದ ಇಸ್ತಿಖಾಮ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟದಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಳು.
ಮೊಹಮ್ಮದ್ ಆಸಿಫ್ ಫೈಝಿ ಹಾಗೂ ಆಯಿಷಾ ಶಿರೀನ್ ದಂಪತಿಗಳ ಪುತ್ರಿಯಾಗಿರುವ ಈಕೆ ಈ ಬಾರಿ ಮೇ 12 ರಂದು ಕೇರಳದ ಕ್ಯಾಲಿಕಟ್ ನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿರುವುದಾಗಿ ಕರ್ನಾಟಕ ಅಲ್ ಬಿರ್ ಕೋರ್ಡಿನೇಟರ್ ಅಕ್ಬರ್ ಅಲಿ ಅಡ್ಡೂರು ತಿಳಿಸಿದ್ದಾರೆ.