ಆಝಾನ್ ಇಸ್ಲಾಂನ ಪ್ರಮುಖ ಭಾಗವಾದರೂ, ಧ್ವನಿವರ್ಧಕ ಅವಿಭಾಜ್ಯ ಅಂಗವೇನಲ್ಲ: ಅಲಹಾಬಾದ್ ಹೈಕೋರ್ಟ್

ಅಲಹಾಬಾದ್: ಧ್ವನಿವರ್ಧಕಗಳ ಬಗ್ಗೆ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಸೀದಿಯಲ್ಲಿ ಆಝಾನ್ ಗಾಗಿ ಧ್ವನಿವರ್ಧಕಗಳನ್ನು ಬಳಸುವುದು ಮೂಲಭೂತ ಹಕ್ಕಿನ ಅಡಿಯಲ್ಲಿ ಬರುವುದಿಲ್ಲ. ಆಝಾನ್ ಇಸ್ಲಾಂನ ಪ್ರಮುಖ ಭಾಗವಾದರೂ, ಧ್ವನಿವರ್ಧಕ ಅವಿಭಾಜ್ಯ ಅಂಗವೇನಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿರುವುದಾಗಿ ndtv.com ವರದಿ ಮಾಡಿದೆ.
ಧ್ವನಿವರ್ಧಕಗಳನ್ನು ಬಳಸಲು ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, ಧ್ವನಿವರ್ಧಕಗಳನ್ನು ಅನುಮತಿಸಲು ಬೇರೆ ಯಾವುದೇ ಆಧಾರಗಳನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ಇದಲ್ಲದೆ, ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ನ್ಯಾಯಾಲಯ ನಿರಾಕರಿಸಿದ್ದು, ಅರ್ಜಿಯಲ್ಲಿ ಮಾಡಿರುವ ಬೇಡಿಕೆ ತಪ್ಪು ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿದೆ.
ಬದೌನ್‌ನ ಬಿಸೌಲಿ ಗ್ರಾಮದಲ್ಲಿ ಮಸೀದಿಗೆ ಧ್ವನಿವರ್ಧಕ ಹಾಕುವ ಮೂಲಕ ಆಜಾನ್‌ಗೆ ಬೇಡಿಕೆಯಿರುವ ಅರ್ಜಿಯನ್ನು ಬಿಸೌಲಿಯ ಬಿಸೌಲಿ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಮುಂದೆ ಸಲ್ಲಿಸಲಾಗಿತ್ತು. 3 ಡಿಸೆಂಬರ್ 2021 ರಂದು, ಧ್ವನಿವರ್ಧಕಗಳನ್ನು ಸ್ಥಾಪಿಸಲು ಎಸ್‌ಡಿಎಂ ಅನುಮತಿ ನಿರಾಕರಿಸಿತು.
ಎಸ್‌ಡಿಎಂ ಆದೇಶದ ವಿರುದ್ಧ ಇರ್ಫಾನ್ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಎಸ್‌ಡಿಎಂ ಆದೇಶವನ್ನು ಪ್ರಶ್ನಿಸಿದರು. ಗುರುವಾರ ಇರ್ಫಾನ್ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ವಿಕೆ ಬಿರ್ಲಾ ಮತ್ತು ನ್ಯಾಯಮೂರ್ತಿ ವಿಕಾಸ್ ಈ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಇಬ್ಬರೂ ನ್ಯಾಯಾಧೀಶರು, ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದು ಮೂಲಭೂತ ಹಕ್ಕು ಅಲ್ಲ ಎಂದು ಹೇಳಿರುವುದಾಗಿ livelaw.com ವರದಿ ಮಾಡಿದೆ.







