Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ದಾರ್ಶನಿಕ, ಕಲಾವಿದ, ಮಾನವತಾವಾದಿ...

ದಾರ್ಶನಿಕ, ಕಲಾವಿದ, ಮಾನವತಾವಾದಿ ರವೀಂದ್ರನಾಥ ಟಾಗೋರ್

ಇಂದು ಟಾಗೋರ್ ಜನ್ಮದಿನ

ನಿಖೀಲ್ ಕೋಲ್ಪೆನಿಖೀಲ್ ಕೋಲ್ಪೆ7 May 2022 9:15 AM IST
share
ದಾರ್ಶನಿಕ, ಕಲಾವಿದ, ಮಾನವತಾವಾದಿ ರವೀಂದ್ರನಾಥ ಟಾಗೋರ್

ಮೇ 7 ಕವಿ, ದಾರ್ಶನಿಕ, ಕಲಾವಿದ, ಮಾನವತಾವಾದಿ ರವೀಂದ್ರನಾಥ ಟಾಗೋರ್‌ರ ಜನ್ಮದಿನ. ಗಾಂಧಿ ಯವರು ಗುರುದೇವ್ ಎಂದು ಕರೆಯುತ್ತಿದ್ದ ಟಾಗೋರ್‌ರ 160ನೇ ಜನ್ಮದಿನವನ್ನು ಕಳೆದ ವರ್ಷ ಸ್ವಯಂಘೋಷಿತ ವಿಶ್ವಗುರುಗಳು ಅವರಂತೆಯೇ ಉದ್ದವಾದ ಬಿಳಿ ಗಡ್ಡಬಿಟ್ಟು ಆಚರಿಸಿ, ಶಾಂತಿಯ ಬಗ್ಗೆ ಉದ್ದುದ್ದ ಭಾಷಣ ಬಿಗಿದಿದ್ದರು. ಆದರೂ, ದೇಶದಾದ್ಯಂತ ಹಿಂಸೆ, ಅಸಹನೆ ಮತ್ತು ಅಸಹಿಷ್ಣುತೆಗಳು ಸರಕಾರಿ ಪ್ರಾಯೋಜಕತ್ವದಲ್ಲಿಯೇ ನಡೆಯುತ್ತಿರುವ ಈ ಸಂದರ್ಭದಲ್ಲಿ, ಎರಡು ವಿಭಿನ್ನ ವ್ಯಕ್ತಿತ್ವಗಳಾದ ರವೀಂದ್ರನಾಥ ಟಾಗೋರ್ ಮತ್ತು ಗಾಂಧಿಯವರು ಹೇಗೆ ಬಹಳಷ್ಟು ಕಟು ಭಿನ್ನಾಭಿಪ್ರಾಯ ಹೊಂದಿದ್ದರೂ, ಪರಸ್ಪರ ಅಪಾರ ಗೌರವವನ್ನೂ ಹೊಂದಿದ್ದರು ಎಂಬ ಕುರಿತು ಈ ಪುಟ್ಟ ಬರಹ.

1934ರಲ್ಲಿ ಬಿಹಾರದಲ್ಲಿ ಭೂಕಂಪ ಸಂಭವಿಸಿ ಭಾರೀ ಸಾವುನೋವು ಉಂಟಾದಾಗ ಗಾಂಧಿಯವರು ಒಂದು ಪತ್ರಿಕಾ ಹೇಳಿಕೆ ನೀಡಿ, ನಾವು ಹರಿಜನರು ಎಂದು ಕರೆಯುವ ಜನರ ಮೇಲೆ ಮಾಡಿದ ಮಹಾ ಪಾಪಕ್ಕೆ ಇದು ದೇವರು ನೀಡಿದ ಶಿಕ್ಷೆ ಎಂಬಂತಹ ಮಾತುಗಳನ್ನು ಆಡಿದ್ದರು. ಅಸ್ಪೃಶ್ಯತೆಯ ಕುರಿತು ಗಾಂಧಿಯವರ ನಿಲುವಿನ ಜೊತೆಗೆ ಸಂಪೂರ್ಣ ಸಹಮತ ಹೊಂದಿದ್ದರೂ, ಇದನ್ನು ಓದಿ ತೀರಾ ಆಸಮಾಧಾನಗೊಂಡ ಟಾಗೋರ್- ಗಾಂಧಿಯವರ ಈ ನಿಲುವನ್ನು ಕಟುವಾಗಿ ಟೀಕಿಸಿ ಜನವರಿ 28, 1934ರ ದಿನಾಂಕದಲ್ಲಿ ಪತ್ರವೊಂದನ್ನು ಬರೆದದ್ದು ಮಾತ್ರ ವಲ್ಲ;ಅದನ್ನು ತಮ್ಮ ಹರಿಜನ ಪತ್ರಿಕೆಯಲ್ಲಿ ಪ್ರಕಟಿಸುವಂತೆ ಯೂ ಕೋರಿದರು. ಇದರಿಂದ ತುಂಬಾ ನೊಂದು ಕೊಂಡರೂ ಗಾಂಧಿಯವರು ಅದನ್ನು ಫೆಬ್ರವರಿ 16, 1934ರ ಸಂಚಿಕೆಯಲ್ಲಿ ಪ್ರಕಟಿಸಿದರು. ಅದರ ಸಾರಾಂಶ ಕೆಳಗಿನಂತಿದೆ:

ಇದನ್ನು ನಂಬಲು ನನಗೆ ಕಷ್ಟವಾಗುತ್ತಿದೆ. ಆದರೆ, ಇದು ನಿಜವಾಗಿಯೂ ನಿಮ್ಮ ಅಭಿಪ್ರಾಯವಾಗಿದ್ದರೆ, ಅದಕ್ಕೆ ಸವಾಲೆಸೆ ಯದೇ ಬಿಡಲಾಗದು. ತಮ್ಮ ಸ್ವಂತ ಅಸ್ಪಶ್ಯತೆಯ ಸಾಮಾಜಿಕ ಆಚರಣೆಯನ್ನು- ಕುರುಡಾಗಿ ಆಚರಿಸುವ ಜನರ ಮೇಲೆ ಬಿಹಾರದ ಕೆಲಭಾಗಗಳಲ್ಲಿ ದೇವರ ಕೋಪವನ್ನು ತಂದ ಆರೋಪವನ್ನು ಮಹಾತ್ಮಾ ಗಾಂಧಿಯವರು ಮಾಡಿರುವುದು ನನಗೆ ನೋವಿನ ಜೊತೆ ಆಶ್ಚರ್ಯವನ್ನು ತಂದಿದೆ. ದೇವರು ನಿಶ್ಚಿತವಾಗಿ ವಿಶೇಷವಾಗಿ ಬಿಹಾರವನ್ನೇ ಆಯ್ಕೆ ಮಾಡಿದಂತಿದೆ. ಇದು ಇನ್ನಷ್ಟು ದುರದೃಷ್ಟಕರ. ಏಕೆಂದರೆ, ಈ ರೀತಿಯ ಅವೈಜ್ಞಾನಿಕ ಅಭಿಪ್ರಾಯವನ್ನು ನಮ್ಮ ದೇಶದ ಬಹಳಷ್ಟು ಜನರು ತಕ್ಷಣವೇ ಒಪ್ಪಿಕೊಳ್ಳುತ್ತಾರೆ... ನಾವು ಬ್ರಹ್ಮಾಂಡದ ವಿಷಯಗಳನ್ನು ನೈತಿಕ ಸಿದ್ಧಾಂತಗಳ ಜೊತೆಗೆ ತಳಕುಹಾಕಬಾರದು. ದುರಂತವೆಂದರೆ, ಇಂತಹ ನಿಲುವುಗಳು ಗಾಂಧಿಯವರಿಗಿಂತ ಹೆಚ್ಚಾಗಿ, ಅವರ ವಿರೋಧಿಗಳಿಗೆ ಸರಿಹೊಂದುತ್ತದೆ. ಗಾಂಧಿಯವರು ಮತ್ತು ಅವರ ಅನುಯಾಯಿಗಳನ್ನೇ ಅವರು, ದೇವರ ಕೋಪಕ್ಕೆ ಹೊಣೆ ಮಾಡಿದರೆ ನನಗೆ ಆಶ್ಚರ್ಯವಾಗದು. ನಮ್ಮ ಪಾಪಗಳು ಮತ್ತು ತಪ್ಪುಗಳು, ಅವೆಷ್ಟೇ ದೊಡ್ಡದಾಗಿರಲಿ, ತನ್ನ ಸ್ವಂತ ಸೃಷ್ಟಿಯನ್ನು ನಾಶಪಡಿಸುವಷ್ಟು ಕೋಪವನ್ನು ತರುವ ಶಕ್ತಿ ಹೊಂದಿಲ್ಲ ಎಂಬ ಸುರಕ್ಷಿತ ಭಾವನೆಯನ್ನು ನಾವು ಹೊಂದಿದ್ದೇವೆ. ಯಾರೋ ಮಾಡಿದ ತಪ್ಪಿಗೆ ಎಲ್ಲರನ್ನೂ ಶಿಕ್ಷಿಸುವುದಾದರೆ, ಅಂತಹ ದೇವರಲ್ಲಿ ನ್ಯಾಯವಿಲ್ಲ.

ತಮ್ಮ ಅದ್ಭುತ ಪ್ರೇರಣೆಯ ಮೂಲಕ ಭಯ ಮತ್ತು ದೌರ್ಬಲ್ಯದಿಂದ ಸ್ವಾತಂತ್ರ್ಯದತ್ತ ನಮ್ಮ ದೇಶದ ಜನರನ್ನು ಕೊಂಡೊಯ್ಯುತ್ತಿರುವುದಕ್ಕೆ ಮಹಾತ್ಮಾಜಿಯವರಿಗೆ ಅತ್ಯಂತ ಆಭಾರಿಗಳಾಗಿದ್ದೇವೆ. ಆದರೆ, ಅವರ ಬಾಯಿಯಿಂದ ಅದೇ ಮನಸ್ಸುಗಳ ಒಳಗಿನ ಅತಾರ್ಕಿಕತೆಯ ಅಂಶಗಳಿಗೆ ಒತ್ತುನೀಡುವ ಮಾತುಗಳು ಬಂದಾಗ ಅತೀವ ನೋವಾಗುತ್ತದೆ. ಈ ಅತಾರ್ಕಿ ಕತೆಯೇ ಸ್ವಾತಂತ್ರ ಮತ್ತು ಆತ್ಮಗೌರವಗಳ ವಿರುದ್ಧ ನಮ್ಮನ್ನು ದೂಡುವ ಶಕ್ತಿಗಳಾಗಿವೆ.

ಇದನ್ನು ಹರಿಜನ ಪತ್ರಿಕೆಯಲ್ಲಿ ಗಾಂಧಿ ಯವರು, ‘ಮೂಢನಂಬಿಕೆಯ ವಿರುದ್ಧ ನಂಬಿಕೆ’ ಎಂಬ ಶೀರ್ಷಿಕೆಯಲ್ಲಿ ಪ್ರತಿಕ್ರಿಯೆಯನ್ನೂ ಪ್ರಕಟಿಸಿದರು. ಅವರು ಆರಂಭದ ಪ್ಯಾರಾದ ಲ್ಲಿಯೇ ತನ್ನ ನಿಲುವನ್ನು ಒಂದಿಷ್ಟೂ ಬದಲಿಸಲಿಲ್ಲ. ಅದರ ಸಾರಾಂಶ ಇಷ್ಟು: ಬರ, ನೆರೆ, ಭೂಕಂಪಗಳು ಕೇವಲ ಭೌತಿಕ ಮೂಲಗಳನ್ನು ಹೊಂದಿವೆ ಎಂಬಂತೆ ಕಾಣಬಹುದು. ಆದರೆ, ನನಗೆ ಹೇಗೋ ಅದು ಮಾನವನ ನೈತಿಕ ಮೌಲ್ಯಗಳ ಜೊತೆಗೆ ಥಳಕುಹಾಕಿಕೊಂಡಿದೆ ಎಂದು ಅನಿಸುತ್ತದೆ. ಆದುದರಿಂದ ತಕ್ಷಣವೇ ಅಸ್ಪೃಶ್ಯತೆಯ ಪಾಪಕ್ಕಾಗಿ ದೇವರ ಭೇಟಿ ಎಂದೆನಿಸಿಬಿಟ್ಟಿತು. ನಾನು ಅಸ್ಪೃಶ್ಯತೆಯ ವಿರುದ್ಧ ಮಾಡುತ್ತಿರುವ ಬೋಧನೆಗಳ ಪಾಪದ ಫಲವಾಗಿಯೇ ಇದು ಸಂಭವಿಸಿದೆ ಎಂದು ಹೇಳಲು ಸನಾತನಿಗಳಿಗೆ ಸೂಕ್ತವಾದ ಹಕ್ಕಿದೆ. (ಇಲ್ಲಿ ನಾವು ಈ ಕಾಲದಲ್ಲಿ ಗಮನಿಸಬೇಕಾದ ಅಂಶವೆಂದರೆ, ಗಾಂಧೀಜಿಯವರ ಹಿಂದುತ್ವಕ್ಕೂ ಅವರು ಸನಾತನಿಗಳು ಎಂದು ಕರೆದು, ಅವರನ್ನೇ ಕೊಂದು, ಇಂದು ದೇಶವಾಳುತ್ತಿರುವವರ ಹಿಂದುತ್ವಕ್ಕೂ ತುಂಬಾ ವ್ಯತ್ಯಾಸವಿದೆ.)

ಇದೇ ರೀತಿಯಾಗಿ ಬರೆಯತ್ತಾ ಗಾಂಧಿಯವರು ವ್ಯಕ್ತಪಡಿಸಿದ ಅಭಿಪ್ರಾಯಗಳ ಚುಟುಕನ್ನು ಮಾತ್ರ ಇಲ್ಲಿ ಕೊಡಲು ಸಾಧ್ಯ. ತನಗೆ ನಿಸರ್ಗದ ನಿಯಮಗಳ ಬಗ್ಗೆ ಎಳ್ಳಷ್ಟೂ ಜ್ಞಾನವಿಲ್ಲ ಎಂದು ಒಪ್ಪಿಕೊಳ್ಳುವ ಅವರು, ತನಗೆ ದೇವರ ಅಸ್ತಿತ್ವವನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೂ, ಅಸ್ಪೃಶ್ಯತೆಯು ಮಹಾಪಾಪವಾಗಿರುವುದರಿಂದ ಇದು ದೇವರು ನೀಡಿದ ಶಿಕ್ಷೆ ಎಂದೇ ತನಗನಿಸುತ್ತದೆ ಎಂಬ ಮಾತುಗಳನ್ನು ಗಾಂಧಿಯವರು ಬರೆದಿದ್ದರು.

ಆದರೆ, ಇದು ಪ್ರಕಟವಾಗುವ ಮೊದಲೇ, ಟಾಗೋರ್ ಅವರು ಯಾಕೋ ಮನನೊಂದು, ಫೆಬ್ರವರಿ 6ರಂದೇ ಒಂದು ಹೇಳಿಕೆ ಹೊರಡಿಸುತ್ತಾರೆ. ಅದರ ಸಾರಾಂಶ ಇಷ್ಟು: ಯಾವುದೋ ಒಂದು ಯಾವಾಗಲೋ ಒಮ್ಮೆ ಎದುರಾಗುವ ಭಿನ್ನಾಭಿಪ್ರಾಯಕ್ಕಾಗಿ, ನಿಜವಾಗಿಯೂ ಜನರಿಗೆ ಸಮರ್ಪಿಸಿಕೊಂಡ ಜೀವ (ಜೀವನ)ಕ್ಕೆ ಕಳಂಕ ಹಚ್ಚುವುದು ಹುಚ್ಚುತನದ ಮಟ್ಟಕ್ಕೆ ಸಾರ್ವಜನಿಕ ಕೃತಘ್ನತೆಯಾದೀತು. ನಾನು ಸಾರ್ವಜನಿಕವಾಗಿ ಬಿಹಾರದ ಭೂಕಂಪದ ಬಗ್ಗೆ ಅವರ ನಂಬಿಕೆಗಳನ್ನು ಟೀಕಿಸಿದೆ. ನಾನು ಸಾರ್ವಜನಿಕವಾಗಿ ಅನೇಕ ಬಾರಿ ಅವರ ಜೊತೆಗೆ ನನ್ನ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಆದರೆ, ಅವರ ಧಾರ್ಮಿಕ ನಂಬಿಕೆ ಮತ್ತು ಬಡ ಜನರ ಕುರಿತ ಪ್ರೀತಿಯನ್ನು- ಬೇರೆಬೇರೆ ಭಿನ್ನಾಭಿಪ್ರಾಯಗಳು ಇದ್ದಾಗಲೂ ನಾನು ತುಂಬಾ ಗೌರವಿಸುತ್ತೇನೆ.

ಸರಿ. ಇದರ ಬಳಿಕ ಗಾಂಧಿಯವರಿಗೆ- ತಾನು ಗುರು ದೇವ್ ಎಂದು ಕರೆಯುವ ರವೀಂದ್ರನಾಥ ಟಾಗೋರ್, ತನ್ನನ್ನು ಇಷ್ಟು ಕಟುವಾಗಿ ಟೀಕಿಸಿದ ಬಗ್ಗೆ ತುಂಬಾ ತಳಮಳವಿತ್ತು. ಅವರು ಟಾಗೋರ್‌ರನ್ನು ಭೇಟಿಯಾಗಿ ಅವರಿಗೆ ಮನವರಿಕೆ ಮಾಡಲು ಕೋಲ್ಕತಾಕ್ಕೆ ರೈಲಿನಲ್ಲಿ ಹೊರಟರು.

ಮಂದೇನಾಯಿತು? ಇಲ್ಲಿ ಸಾರ್ವಜನಿಕವಾಗಿ ಕಾಣಿಸಿರುವ ಚಿತ್ರದಂತೆ ಅವರು ಭೇಟಿಯಾಗಿ, ನಂತರ ಗಾಢ ಚರ್ಚೆ ಆಯಿತು. ಇಬ್ಬರೂ ತಮ್ಮ ನಿಲುವಿನಿಂದ ಕದಲಲೇ ಇಲ್ಲ. ಗಾಂಧೀಜಿ ನಿರಾಶರಾದರು. ಟಾಗೋರ್ ತಳಮಳಕ್ಕೆ ಬಿದ್ದರು.

ನಂತರ ನಡೆದುದರ ಬಗ್ಗೆ ನೆಹರೂ ಆಪ್ತರೂ, ಯುಎಸ್‌ಎಯಲ್ಲಿ ಭಾರತೀಯ ರಾಯಭಾರಿಯೂ ಆಗಿದ್ದ ಆಬಿದ್ ಹುಸೇನ್ ಅವರು ಹಲವು ವರ್ಷಗಳ ಹಿಂದೆ ಮೈಸೂರಿನ ಅಬ್ದುಲ್ ನಝೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಚರಿಸಿದ್ದ, ಒಂದು ರೀತಿಯಲ್ಲಿ ಭಾರತದಲ್ಲಿ ಪಂಚಾಯಿತ್ ರಾಜ್ ಜನಕನಾದ ಎಸ್.ಕೆ. ದೇ. ಅವರ ಜನ್ಮದಿನ ಆಚರಣೆಯ ದಿನ ನಡೆದ ವಿಚಾರ ಗೋಷ್ಠಿಯಲ್ಲಿ ಹೇಳಿದ್ದು ನೆನಪಿದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಆಗಿದ್ದ ವಜಾಹತ್ ಹಬೀಬುಲ್ಲಾ ಅವರೂ, ಈ ಮಾತುಗಳನ್ನು ಸಮರ್ಥಿಸಿದ್ದರು. ಆ ಸಭೆಯಲ್ಲಿ ದಾಖಲೆಕಾರನಾಗಿ ನಾನು ದಾಖಲಿಸಿದ್ದು ನನ್ನ ಮನಸ್ಸಲ್ಲೂ ದಾಖಲಾಗಿದೆ; ಈ ಕುರಿತ ಬರವಣಿಗೆಯಲ್ಲೂ. ಅದು ಹೀಗಿದೆ:

ಗಾಂಧಿಯವರು ನಿರಾಶರಾಗಿ ಮರಳಿದ ಬಳಿಕ ತಳಮಳಕ್ಕೆ ಒಳಗಾದ ಟಾಗೋರ್ ಹೀಗೆ ಬರೆದರಂತೆ; ನನಗೆ ನಿದ್ದೆ ಬರಲಿಲ್ಲ. ನೀವು ಹೋದ ತಕ್ಷಣ ಯೋಚಿಸಿದೆ. ಹಿಂದಿನಂತೆ ನಾನು ಸರಿ, ನೀವು ತಪ್ಪು ಅನಿಸಿತು. ಮಧ್ಯರಾತ್ರಿ ಮತ್ತೆ ಯೋಚಿಸಿದೆ. ನಾನು ಹೆಚ್ಚು ಸರಿ, ನೀವು ಹೆಚ್ಚು ತಪ್ಪು ಅನಿಸಿತು. ಇವತ್ತು ಬೆಳಗ್ಗೆ ಇದನ್ನು ಬರೆಯುವ ಮೊದಲು ಮತ್ತೊಮ್ಮೆ ಯೋಚಿಸಿದೆ. ನಾನು ಈ ವಿಷಯದಲ್ಲಿ ಸಂಪೂರ್ಣ ಸರಿ. ನೀವು ಸಂಪೂರ್ಣ ತಪ್ಪು. ಆದರೂ ನಿಮ್ಮಂತಹ ಮಹಾತ್ಮರ ಪಾದಧೂಳಿನಿಂದ ನನ್ನ ಹೊಸ್ತಿಲು ಪಾವನವಾಗಿದೆ.

ಇವರಿಬ್ಬರ ಪತ್ರ ವ್ಯವಹಾರಗಳು, ಭೇಟಿಗಳು, ಆಧುನಿಕ ಸಂಪರ್ಕ ಸಾಧನಗಳಿಲ್ಲದ ಯುಗದ ಸಂಬಂಧಗಳು, ಭಿನ್ನಾಭಿಪ್ರಾಯಗಳ ನಡುವೆಯೂ ಕೋಟ್ಯಂತರ ಭಾರತೀಯರ ಮೇಲೆ ಪ್ರಭಾವ ಬೀರಿದ ಸಮಾನ ಅಂಶಗಳೇನು? ಭಾರತೀಯರ ಸ್ವಾತಂತ್ರ್ಯ, ಸಮಾನತೆ ಮತ್ತು ಅಣ್ಣತಮ್ಮಂದಿರ ಸಂಬಂಧ. ಗಾಂಧಿಯವರು ರಾಷ್ಟ್ರೀ ಯತೆಯು ಸ್ವಾವಲಂಬನೆಯಿಂದ ಬರಬೇಕು ಎಂದು ಹೇಳಿದ್ದರೆ, ಟಾಗೋರ್- ಸಾಮ್ರಾಜ್ಯ ವಾದವು ರಾಷ್ಟ್ರೀಯತೆಯ ಒಂದು ವಿಸ್ತರಣೆ ಎಂದು ಹೇಳಿದ್ದರು. ಆದರೆ, ಸನಾತನಿಗಳ ಕುಟಿಲ ತಂತ್ರಗಳ ಬಗ್ಗೆ ಇಬ್ಬರಿಗೂ ಅರಿವಿತ್ತು.

ಟಾಗೋರ್ ಜನ್ಮದಿನದಂದು ಇವರಿಬ್ಬರ ಒಂದೇ ಸಂದೇಶವೆಂದರೆ, ಭಾರತೀಯರಾಗಿ, ವಿಶ್ವಪ್ರಜೆಗಳಾಗಿ ಮಾತಾಡಿ, ಚರ್ಚಿಸಿ, ಬಗೆಹರಿಸಿ. ಅದು ಬಿಟ್ಟು ಕಚ್ಚಾಡಬೇಡಿ, ಕಾದಾಡಬೇಡಿ. ದಮನಿತ ರೆಲ್ಲರ ಅಭಿಪ್ರಾಯಗಳನ್ನು, ಸ್ವಾತಂತ್ರ್ಯವನ್ನು ದಮನಿಸಲಾಗುತ್ತಿರುವಾಗ, ದಮನಿತರಾದ ನಾವೇ ನಮ್ಮಿಳಗಿನ ಅಭಿಪ್ರಾಯಗಳನ್ನು ದಮನಿಸುವುದು ಅಥವಾ ಕಚ್ಚಾಡುವುದು ಶತ್ರುವಿಗೇ ಅನುಕೂಲ. ಪರಸ್ಪರ ಗೌರವದಿಂದ ಹೋರಾಡೋಣ. ಅಷ್ಟೇ... ಇನ್ನೇನಿಲ್ಲ!

share
ನಿಖೀಲ್ ಕೋಲ್ಪೆ
ನಿಖೀಲ್ ಕೋಲ್ಪೆ
Next Story
X