ಭಟ್ಕಳ: ಅನಧಿಕೃತ ಸಂಗ್ರಹಿಸಿದ ಆರೋಪ; ವಿದೇಶಿ ಸಿಗರೇಟ್ ವಶಕ್ಕೆ

ಭಟ್ಕಳ: ಗೋದಾಮಿನ ಮೇಲೆ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ, ಅನಧಿಕೃತ ಸಂಗ್ರಹಿಸಿದ ಆರೋಪದಲ್ಲಿ ವಿದೇಶಿ ಸಿಗರೇಟ್ ಬಾಕ್ಸ್ ಗಳನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಚೌಕ್ ಬಝಾರ್ ನಲ್ಲಿ ನಡೆದಿದೆ.
ತಾಲೂಕಿನಲ್ಲಿ ವಿದೇಶಿ ಸಿಗರೇಟ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಾಲೂಕಿನ ಯುವಕರು ಇದರ ವ್ಯಸನಿಗಳಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ಠಾಣೆಯ ಸಿ.ಪಿ.ಐ ದಿವಾಕರ ನೇತೃತ್ವದಲ್ಲಿ ತಾಲೂಕಿನ ಚೌಕ್ ಬಝಾರ್ ನಲ್ಲಿರುವ ಆರೋಪಿ ಮರಜೂಕ್ ಅಹ್ಮದ್ ಎಂಬಾತನ ಗೋಡನ್ ನಲ್ಲಿ ಸಂಗ್ರಹಿಸಿಟ್ಟ 2,25,500 ರೂ. ಮೌಲ್ಯದ ವಿದೇಶಿ ಸಿಗರೇಟನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕೊಟ್ಪಾ ಕಾಯ್ದೆ ಅಡಿಯಲ್ಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story