ಮಂಗಳೂರು; ಕಸ ಹಾಕುವ ವಿಚಾರದಲ್ಲಿ ಹಲ್ಲೆ: ಇಬ್ಬರ ಬಂಧನ

ಮಂಗಳೂರು: ಬಡ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಅತ್ತಾವರ ಬಳಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಿಶ್ವನಾಥ್ ಮತ್ತು ಮಧುಸೂದನ್ ಎಂದು ಗುರುತಿಸಲಾಗಿದೆ.
ಮೇ 4 ರಂದು ಘಟನೆ ನಡೆದಿದ್ದು, ಅತ್ತಾವರದ ಅಂಬಿಕಾ ಮ್ಯಾನ್ಶನ್ ಅಪಾರ್ಟ್ ಮೆಂಟ್ ನಲ್ಲಿ ಕಸ ಹಾಕುವ ವಿಚಾರದಲ್ಲಿ ಬಿಪುಲ್ ಕುಮಾರ್ ಎಂಬವರಿಗೆ ಬಿಶ್ವನಾಥ್, ಮಧುಸೂದನ್, ಅಮೃತ, ರಾಜೇಶ್, ನೀರಜ್ ಎಂಬವರು ಹಲ್ಲೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಬಡ ಕುಟುಂಬದ ದಂಪತಿ ಹಾಗೂ ಮಗುವಿನ ಮೇಲೆಯೂ ಹಲ್ಲೆ ನಡೆಸಿದ್ದಾರೆನ್ನಲಾಗಿದ್ದು, ಕೃತ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ವಿಶ್ವನಾಥ ಮತ್ತು ಅಮೃತ ದಂಪತಿ ಸೇರಿ ಹೊರಗಿನಿಂದ ಜನರನ್ನು ತರಿಸಿ ಬಡ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
Next Story





