ಚಾಮರಾಜನಗರ: ಕಬ್ಬಿನ ಲಾರಿ ಮಗುಚಿ ಬಿದ್ದು ಇಬ್ಬರು ಪಾದಚಾರಿಗಳು ಮೃತ್ಯು

ಚಾಮರಾಜನಗರ: ಚಾಮರಾಜನಗರದ ಡಿವಿಷನ್ ರಸ್ತೆ ಅಕ್ಬರ್ ಕಾಂಪ್ಲೆಕ್ಸ್ ನ ಎನ್ ಡಿ ಎ. ಲಾಡ್ಜ್ ತಿರುವಿನಲ್ಲಿ ಶನಿವಾರ ಸಂಜೆ ಕಬ್ಬು ತುಂಬಿದ್ದ ಲಾರಿಯೊಂದು ಇಬ್ಬರು ಪಾದಚಾರಿಗಳ ಮೇಲೆ ಮಗುಚಿ ಬಿದ್ದಿದ್ದು, ಘಟನೆಯಲ್ಲಿ ಇಬ್ಬರು ಪಾದಚಾರಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಪಾದಚಾರಿಗಳ ಮೃತದೇಹವನ್ನು ಯಡಪುರ ಬಳಿ ಇರುವ ಆಸ್ಪತ್ರೆಗೆ ಸಾಗಿಸಲಾಗಿದೆ.
ಮೃತರ ಗುರುತು ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ.
Next Story





