ಮಂಗಳೂರು: ಭಾರತದ ಅತೀ ದೊಡ್ಡ ಮನರಂಜನಾ ಮೇಳ ಮತ್ತು ವಸ್ತು ಪ್ರದರ್ಶನ

ಮಂಗಳೂರು : ಜಿಲ್ಲೆಯ ಜನತೆಯ ಬಹುನಿರೀಕ್ಷಿತ ‘ರಾಷ್ಟ್ರೀಯ ಗ್ರಾಹಕರ ಮೇಳ’ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಪ್ರತೀ ದಿನ ಸಂಜೆ 4 ರಿಂದ 9 ಗಂಟೆಯವರೆಗೆ ಪ್ರದರ್ಶನ ನಡೆಯಲಿದೆ. ರಾಷ್ಟ್ರೀಯ ಗ್ರಾಹಕರ ಮೇಳವು ದಕ್ಷಿಣ ಭಾರತದಾದ್ಯಂತ ಕಳೆದ ಮೂರು ದಶಕಗಳಿಂದ ಗ್ರಾಹಕರ ಮೇಳಗಳನ್ನು ಸಂಘಟಿಸುವಲ್ಲಿ ಧ್ರುವತಾರೆಯಾಗಿ ಗುರುತಿಸಿಕೊಂಡಿರುವ National Consumer Fair (NCF) ನಿಂದ ಸಂಘಟಿಸಲ್ಪಡುತ್ತಿದೆ.
ಮಂಗಳೂರಿಗೆ ವಿನೂತನ ರೀತಿಯ ಮೆಗಾಶೋಗಳನ್ನು ನೀಡಿರುವ ಈ ಸಂಸ್ಥೆ ಪ್ರತಿ ಬಾರಿಯೂ ಹೊಚ್ಚ ಹೊಸ ಶೋಗಳನ್ನು ನೀಡುತ್ತಿದ್ದು, ಸಂಪೂರ್ಣ ಕುಟುಂಬಕ್ಕಾಗಿನ ಶಾಪಿಂಗ್ ಮತ್ತು ಮನರಂಜನಾ ಮೇಳವಾಗಿರುತ್ತದೆ.
ರಾಷ್ಟ್ರೀಯ ಗ್ರಾಹಕರ ಮೇಳದ ವಿಶೇಷ ಆಕರ್ಷಣೆಯಾಗಿ ಭವ್ಯ ‘ಲಂಡನ್ ಬ್ರಿಡ್ಜ್’ನ ಪ್ರತಿಕೃತಿ ಲಭ್ಯವಿದ್ದು, ಯುವಜನರ ಹಾಗೂ ಮಕ್ಕಳ ವಿಶೇಷ ಆಕರ್ಷಣೆಯಾಗಲಿದೆ.
ಮಂಗಳೂರಿನಲ್ಲಿ ಸಂಘಟಿಸಲಾಗುತ್ತಿರುವ ಯಶಸ್ವಿ ರಾಷ್ಟ್ರೀಯ ಗ್ರಾಹಕರ ಮೇಳವು ಭಾರತದಲ್ಲಿಯೇ ಅತೀ ದೊಡ್ಡ ಮತ್ತು ಸಂಪೂರ್ಣ ಕುಟುಂಬಕ್ಕಾಗಿನ ಶಾಪಿಂಗ್ ಮತ್ತು ಮನರಂಜನಾ ಮೇಳ ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಗ್ರಾಹಕರ ಮೇಳವು ಹಲವು ಮಳಿಗೆಗಳೊಂದಿಗೆ, ವಿಶೇಷ ಮತ್ತು ಅತ್ಯಧಿಕ ರಿಯಾಯಿತಿ ದರದಲ್ಲಿ ಗ್ರಾಹಕರನ್ನು ಆಕರ್ಷಿಸಲಿದೆ. ಗೃಹ ಬಳಕೆ ಉತ್ಪನ್ನಗಳು, ಅಟೋಮೊಬೈಲ್ಸ್, ಅಡುಗೆ ಮನೆ ಉತ್ಪನ್ನಗಳು, ಕೈಮಗ್ಗದ ಉತ್ಪನ್ನಗಳು, ಕರಕುಶಲ ಉತ್ಪನ್ನಗಳು, ಡ್ರೆಸ್ ಮೆಟೀರಿಯಲ್ಸ್, ಫ್ಯಾಶನ್ ಪಾದರಕ್ಷೆಗಳು, ಆರೋಗ್ಯ ಮತ್ತು ಆಟಿಕೆಗಳು, ಆಹಾರೋತ್ಪನ್ನಗಳು ಮತ್ತು ಇನ್ನೂ ಹಲವಾರು ಉತ್ಪನ್ನಗಳು ಮಂಗಳೂರಿನ ಕರಾವಳಿ ಉತ್ಸವ ಮೈದಾನಿನಲ್ಲಿ ಲಭ್ಯವಾಗಲಿವೆ.
ನೈಜ ಗಾತ್ರದಲ್ಲಿರುವ ಪ್ರಪಂಚದ ವಿವಿಧ ಪ್ರದೇಶದ ದಟ್ಟ ಅರಣ್ಯದ ರೊಬೊಟ್ ಮೃಗಗಳು ರಾಷ್ಟ್ರೀಯ ಗ್ರಾಹಕ ಮೇಳದ ಅಂಗವಾಗಿ ಮಂಗಳೂರಿನಲ್ಲಿ ರೊಬೊಟ್ ಯಂತ್ರಗಳಿಂದ ನಿರ್ಮಿಸಲಾದ ವನ್ಯಮೃಗಗಳ ಮೃಗಾಲಯವನ್ನು ನಿರ್ಮಿಸಲಾಗಿದೆ. ಆಫ್ರಿಕಾದ ದಟ್ಟ ಕಾಡಿನ ಆನೆಗಳಿಂದ ಹಿಡಿದು ಚೈನೀಸ್ ಪಾಂಡಾ, ಅಸ್ಸಾಂನ ಖಡ್ಗಮೃಗ, ಅಟ್ಲಾಂಟಿಕ್ ಸಾಗರದ ಶಾರ್ಕ್, ಬಂಗಾಳದ ಬಿಳಿ ಹುಲಿ, ನೀರಾನೆ, ಕಿಂಗ್‌ಕಾಂಗ್, ಗುಜರಾತಿನ ಸಿಂಹ, ಕೆಂಪು ಸಮುದ್ರದ ಡಾಲ್ಪಿನ್, ಕರಡಿ, ಹಾವು, ಮೊಸಳೆ, ಪಶ್ಚಿಮಬಂಗಾಳದ ಆನೆಗಳ ಪರಿವಾರ ಈ ಪ್ರದರ್ಶನದ ಮುಖ್ಯ ಆಕರ್ಷಣೆ.
ಮನೋರಂಜನಾ ವಿಭಾಗದಲ್ಲಿ ಮೆರ್ರಿ ಕೊಲಂಬಸ್, ಡ್ಯಾಶಿಂಗ್ ಕಾರ್, ಟೋರ್ರಾ ಟೋರ್ರಾ, ಮಿನಿ ಟ್ರೇನ್... ಹಾಗೂ ಮಂಗಳೂರಿನಲ್ಲಿ ವಿನೂತನ ಮಾದರಿಯ ಅಮ್ಯೂಸ್‌ಮೆಂಟ್‌ಗಳಾದ ಸ್ಪೇಸ್ ಜೆಟ್ (ಸ್ವಯಂ ನಿಯಂತ್ರಣ ವಿಮಾನ), ಮಿನಿ ಶಟ್ಲ್ (Small Roller Coaster) ಗ್ರಾಹಕರ ಮನತಣಿಸಲಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಸ್ಥಳ : ಮಂಗಳಾ ಕ್ರೀಡಾಂಗಣ, ಮಂಗಳೂರು
ಸಮಯ : ಸಂಜೆ 4ರಿಂದ ರಾತ್ರಿ 9ರವರೆಗೆ