ಬಂಟ್ವಾಳ: ಲಯನ್ಸ್ ಕ್ಲಬ್ ವತಿಯಿಂದ ಈದ್ ಸಂಭ್ರಮಾಚರಣೆ

ಬಂಟ್ವಾಳ : ರಮಝಾನ್ ತಿಂಗಳಲ್ಲಿ ನಿರಾಹಾರಿಗಳಾಗಿ ಸಕಲ ದೇಹೇಚ್ಚೆಗಳನ್ನೂ ನಿಯಂತ್ರಿಸಿ ಮುಂಜಾನೆ ಯಿಂದ ಮುಸ್ಸಂಜೆವರೆಗೂ ಯಾವುದೇ ಲೌಕಿಕ ಉದ್ದೇಶಗಳಿಲ್ಲದೆ ಕೇವಲ ದೇವ ಸಂಪ್ರೀತಿ ಬಯಸಿ ಧಾರ್ಮಿಕ ಆಚರಣೆಯಾಗಿ ಕೈಗೊಳ್ಳುವ ವೃತವೇ ಇಸ್ಲಾಮಿನ ಪವಿತ್ರ ರಮ್ಜಾನ್ ಉಪವಾಸವಾಗಿದೆ ಎಂದು ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಹೇಳಿದರು.
ಬಂಟ್ವಾಳ ಲಯನ್ಸ್ ಕ್ಲಬ್ ವತಿಯಿಂದ ಬಿ ಸಿ ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಶುಕ್ರವಾರ ನಡೆದ ಅಂತರಾಷ್ಟ್ರೀಯ ಲಯನ್ಸ್ ಜಿಲ್ಲಾ ಈದ್ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಮಾತನಾಡಿದ ಅವರು ಉಪವಾಸ ಎಂಬುದು ಒಂದು ಪ್ರಬಲವಾದ ಅಹಿಂಸಾ ಅಸ್ತ್ರವಾಗಿದ್ದು ಗಾಂಧೀಜಿಯವರು ಉಪವಾಸ ಸತ್ಯಾಗ್ರಹಗಳ ಮೂಲಕ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟ ಸಾಕಷ್ಟು ಪರಿಣಾಮಕಾರಿಯಾಗಿತ್ತು ಎಂದು ಅವರು ಅಭಿಪ್ರಾಯ ಪಟ್ಟರು.
ಲಯನ್ಸ್ ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಈದ್ ಸಂಭ್ರಮಾಚರಣೆಯ ಜಿಲ್ಲಾ ಪ್ರಧಾನ ಸಂಚಾಲಕ ಹಾಜಿ ಜಿ ಮುಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿದ್ದರು.
ಲಯನ್ಸ್ ಸ್ಥಾಪಕಾಧ್ಯಕ್ಷ ಡಾ. ವಸಂತ ಬಾಳಿಗಾ, ನಿಕಟಪೂರ್ವ ಗವರ್ನರ್ ಡಾ ಗೀತಾ ಪ್ರಕಾಶ್ ಎ, ಜಿಲ್ಲಾ ಗವರ್ನರ್ ಸಂಜೀತ್ ಶೆಟ್ಟಿ, ಉಪ ಗವರ್ನರ್ ಗಳಾದ ಡಾ. ಮೆಲ್ವಿನ್ ಡಿಸೋಜ, ಭಾರತಿ ಬಿ ಎಂ, ಕ್ಯಾಬಿನೆಟ್ ಸೆಕ್ರೆಟರಿ ಶಶಿಧರ ಮಾರ್ಲ, ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ಬೆಳ್ತಂಗಡಿ-ನಡಾ ಸರಕಾರಿ ಪ್ರೌಢಶಾಲಾ ಶಿಕ್ಷಕ ಯಾಕೂಬ್ ಎಸ್, ಡಾಕ್ಟರೇಟ್ ಪದವೀಧರೆ ಡಾ. ಲಿಫಾಂ ರೋಶನಾರಾ ಹಾಗೂ ವಿಶೇಷ ಚೇತನ ಸಾಧಕ ಅಹ್ಮದ್ ಕಬೀರ್ ಕಂಚಿನೋಡಿ-ಮೂರ್ಜೆ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಭಾಷಣಗಾರ ಅಬ್ದುಲ್ ರಝಾಕ್ ಅನಂತಾಡಿ, ಲಯನ್ಸ್ ಜಿಲ್ಲಾ ಗವರ್ನರ್ ವಸಂತ್ ಕುಮಾರ್ ಶೆಟ್ಟಿ ಹಾಗೂ ದಫ್ ಸಂಯೋಜಕ ಲತೀಫ್ ನೇರಳಕಟ್ಟೆ ಅವರನ್ನು ಗೌರವಿಸಲಾಯಿತು.
ಅಬೂಬಕ್ಕರ್ ಕುಕ್ಕಾಡಿ, ನೋಟರಿ ಅಬೂಬಕ್ಕರ್ ವಿಟ್ಲ, ಮುಹಮ್ಮದ್ ಖಲಂದರ್ ಕೆ, ಮೊಯಿದಿನ್ ಕುಂಞಿ ಸನ್ಮಾನಿತರನ್ನು ಪರಿಚಯಿಸಿದರು. ಸನ್ಮಾನಿತರ ಪರವಾಗಿ ಯಾಕುಬ್ ನಡಾ ಅನಿಸಿಕೆ ವ್ಯಕ್ತಪಡಿಸಿದರು. ಕನ್ನಂಗಾರ್ ಇಶಾ-ಅತುಸ್ಸುನ್ನ ದಫ್ ಸಮಿತಿ ಸದಸ್ಯರು ದಫ್ ಪ್ರದರ್ಶನ ಪ್ರಸ್ತುತ ಪಡಿಸಿದರು.
ಲಯನ್ ಗಳಾದ ದಾಮೋದರ ಬಿ.ಎಂ, ಟಿ. ಮುಹಮ್ಮದ್ ಅಲಿ, ಅಬ್ದುಲ್ ಖಾದರ್, ಶ್ರೀನಿವಾಸ್ ಪೂಜಾರಿ ಮೆಲ್ಕಾರ್, ಜಯರಾಂ ದೇರಪ್ಪಜ್ಜನಮನೆ, ಕವನ್ ಕುಬೆವೂರು, ಲೋಕೇಶ್ ಉಳ್ಳಾಲ, ಹರೀಶ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
ಹಾಜಿ ಜಿ. ಮುಹಮ್ಮದ್ ಹನೀಫ್ ಸ್ವಾಗತಿಸಿ, ಅಬ್ದುಲ್ ಖಾದರ್ ಸಕಲೇಶಪುರ ವಂದಿಸಿದರು. ಬಿ.ಎ. ಮುಹಮ್ಮದ್ ಬಂಟ್ವಾಳ ಕಿರಾಅತ್ ಪಠಿಸಿದರು. ಲಯನ್ ಡಾ ಧೀರಜ್ ಹೆಬ್ರಿ ಧ್ವಜವಂದನೆಗೈದರು. ಮೈಮೂನಾ ಮೊಯಿದಿನ್ ಹಾಗೂ ರಾಧಾಕೃಷ್ಣ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.







.jpeg)
.jpeg)


.jpeg)

.jpeg)



