ಪ್ರಮೋದ್ ಮಧ್ವರಾಜ್ ಬಿಜೆಪಿಗೂ ದ್ರೋಹ ಬಗೆಯುವುದು ಖಂಡಿತ: ಯು.ಆರ್.ಸಭಾಪತಿ
ಉಡುಪಿ : ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಒಂದು ರಾಷ್ಟೀಯ ಪಕ್ಷವಾಗಿದ್ದು ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ಅಧಿಕಾರದ ಆಸೆಯಿಂದ ಬಿಜೆಪಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಸೇರ್ಪಡೆಗೊಳಿಸಿದರೆ ಬಿಜೆಪಿಗೂ ನಾಳೆ ದ್ರೋಹ ಬಗೆಯುವುದು ಸರ್ವ ವಿಧಿತ ಎಂದು ಮಾಜಿ ಶಾಸಕ ಯು.ಆರ್.ಸಭಾಪತಿ ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಪ್ರಮೋದ್ ಮಧ್ವರಾಜ್‌ರವರಿಗೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಪ್ರಥಮ ಬಾರಿಗೆ ಸಚಿವ ಸ್ಥಾನ ನೀಡಿತ್ತು. ಪಕ್ಷದ ಸಂಕ್ಟಷ್ಟ ಕಾಲದಲ್ಲಿ ಪಕ್ಷ ಸಂಘಟನೆಯ ಯಾವುದೇ ಕಾರ್ಯಕ್ಕೆ ತನ್ನನ್ನು ತೊಡಗಿಸಿಕೊಳ್ಳದೆ ಕೊರೊನ ಸಂಕಷ್ಟ ಪರಿಸ್ಥಿತಿಯಲ್ಲೂ ಜನಸೇವೆ ಮಾಡದೇ ಮನೆಯಲ್ಲೇ ರಾಜಕೀಯ ಮಾಡುತಿದ್ದರು. ಇನ್ನು ಮುಂದೆ ನಿಸ್ಸಂದೇಹವಾಗಿ ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಾರ್ಯಕರ್ತರು ಬಲಾಡ್ಯಾವಾಗಿ ಕಟ್ಟುವು ದಕ್ಕೆ ತಾನು ಶ್ರಮಿಸುತ್ತಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





