ಸಂಜೀವಿನಿ ಸ್ವಸಹಾಯ ಗುಂಪಿನ ಉತ್ಪನ್ನಗಳ ಶೋಕೇಸ್ ಅನಾವರಣ

ಉಡುಪಿ : ಉಡುಪಿ ಜಿಪಂ ಕಚೇರಿಯಲ್ಲಿ ಸಂಜೀವಿನಿ ಸ್ವಸಹಾಯ ಗುಂಪಿನ ಗ್ರಾಮೀಣ ಮಹಿಳೆಯರು ತಯಾರಿಸಿ ರುವ ಉತ್ಪನ್ನಗಳ ಶೋಕೇಸ್ ಅನ್ನು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಶನಿವಾರ ಅನಾವರಣಗೊಳಿಸಿದರು.
ಈ ಶೋ ಕೇಸ್‌ಗಳಲ್ಲಿ ಚೇರ್ಕಾಡಿ ಪ್ರಗತಿ ಸಂಜೀವಿನಿ ಒಕ್ಕೂಟದ ಪ್ರಸನ್ನಾ ಪ್ರಸಾದ್ ಭಟ್, ಯಶೊಧಾ, ಕಾರ್ಕಳ ಆಶ್ರಯ ಸಮುದಾಯ ಸಂಘಟನೆ ಲಿಂಗತ್ವ ಅಲ್ಪಸಂಖ್ಯಾತರು, ಮರವಂತೆ ಕಡಲ ಸಿರಿ ಸಂಜೀವಿನಿ ಒಕ್ಕೂಟದ ಸುಶೀಲ, ಶಿವಪುರ ಶಿವ ದುರ್ಗೆ ಸಂಜೀವಿನಿ ಒಕ್ಕೂಟದ ಜಯಂತಿ, ಯಡ್ತಾಡಿ ಚಾಮುಂಡೇಶ್ವರಿ ಸಂಜೀವಿನಿ ಒಕ್ಕೂಟದ ಪ್ರೇಮ, ಪೆರ್ಡೂರು ಪದ್ಮ ಕಮಲ ಸಂಜೀವಿನಿ ಒಕ್ಕೂಟದ ಶಾಂಭವಿ, ಆಲೂರು ಭುವನೇಶ್ವರಿ ಸಂಜೀವಿನಿ ಒಕ್ಕೂಟದ ಪಾರ್ವತಿ ತಯಾರಿಸುತ್ತಿರುವ ತೆಂಗಿನ ಚಿಪ್ಪಿನ ಕರಕುಶಲ ವಸ್ತುಗಳು, ಕಲಾತ್ಮಕ ಸ್ಮರಣಿಕೆಗಳು, ಮಣ್ಣಿನ ಕರಕುಶಲ ವಸ್ತುಗಳು, ಅಲಂಕಾರಿಕ ಕುಂಡಗಳಲ್ಲಿ ಒಳಾಂಗಣ ಗಿಡಗಳು, ಬ್ಯಾಗ್‌ಗಳು, ಹ್ಯಾಂಡ್ ಮೇಡ್ ಪೇಪರ್ ಬ್ಯಾಗ್‌ಗಳು, ಆಫೀಸ್ ಫೈಲ್, ಎನ್ವಲಪ್‌ಗಳು, ಮಣ್ಣಿನ ಕೃತಕ ಆಭರಣಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.
ಈ ಸಂದರ್ಭದಲ್ಲಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮ ರಾವ್, ಜಿಪಂ ಸಿಇಓ ಡಾ.ನವೀನ್ ಭಟ್ ವೈ, ಜಿಪಂ ಯೋಜನಾ ನಿರ್ದೇಶಕ ಎಂ. ಬಾಬು ಮೊದಲಾದವರು ಉಪಸ್ಥಿತರಿದ್ದರು.





