ರಕ್ತಸಂಬಂಧಿಗಳ ನಡುವೆ ವಿವಾಹ : ರಾಜ್ಯಕ್ಕೆ ಎರಡನೇ ಸ್ಥಾನ

ಸಾಂದರ್ಭಿಕ ಚಿತ್ರ
ಬೆಂಗಳೂರು: ರಕ್ತಸಂಬಂಧಿಗಳ ನಡುವೆ ವಿವಾಹ ನಡೆಯುವಲ್ಲಿ ಕರ್ನಾಟಕ ಇಡೀ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. 15-49 ವರ್ಷ ವಯಸ್ಸಿನ ಮಹಿಳೆಯರು ರಕ್ತಸಂಬಂಧಿಗಳ ಜತೆಗೇ ವೈವಾಹಿಕ ಬಂಧನಕ್ಕೆ ಒಳಗಾಗುತ್ತಿರುವ ಶೇಕಡಾವಾರು ಪ್ರಮಾಣ ರಾಜ್ಯದಲ್ಲಿ ಅಧಿಕ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ವರದಿ ಹೇಳಿದೆ.
ರಾಜ್ಯದಲ್ಲಿ ಶೇಕಡ 27ರಷ್ಟು ಮಹಿಳೆಯರು ತಮ್ಮ ನಿಕಟ ಸಂಬಂಧಿಗಳು ಅಂದರೆ ಸೋದರ ಸಂಬಂಧಿ, ಮಾವ ಮತ್ತು ಬಾವಂದಿರ ಜತೆ ವಿವಾಹವಾಗುತ್ತಿದ್ದಾರೆ. ದೇಶದಲ್ಲೇ ಅತ್ಯಧಿಕ ಪ್ರಮಾಣದಲ್ಲಿ (ಶೇಕಡ 28) ಇಂಥ ವಿವಾಹ ಆಗುತ್ತಿರುವುದು ತಮಿಳುನಾಡಿನಲ್ಲಿ. ರಾಷ್ಟ್ರೀಯ ಸರಾಸರಿ ಶೇಕಡ 11ಕ್ಕಿಂತ ಕಡಿಮೆ ಇದೆ.
ರಕ್ತಸಂಬಂಧಿಗಳ ನಡುವಿನ ವಿವಾಹ ಪ್ರಕರಣಗಳ ಅಂಕಿ ಅಂಶಗಳನ್ನು ವಿಶ್ಲೇಷಿಸಿದಾಗ, ಶೇಕಡ 9.6ರಷ್ಟು ಮಹಿಳೆಯರು ತಮ್ಮ ತಂದೆಯ ಕಡೆಯ ರಕ್ತಸಂಬಂಧಿಗಳನ್ನು ವಿವಾಹವಾಗುತ್ತಿದ್ದಾರೆ. ಅಂತೆಯೇ ಶೇಕಡ 13.9ರಷ್ಟು ಮಹಿಳೆಯರು ತಾಯಿ ಕಡೆಯ ರಕ್ತಸಂಬಂಧಿಕರನ್ನು ವಿವಾಹವಾಗುತ್ತಿದ್ದಾರೆ. ಶೇಕಡ 0.5ರಷ್ಟು ಮಂದಿ ಎರಡನೇ ಸೋದರ ಸಂಬಂಧಿಗಳನ್ನು ಶೇಕಡ 0.2ರಷ್ಟು ಮಂದಿ ಮಾವಂದಿರನ್ನು ಮತ್ತು ಶೇಖಡ 2.5ರಷ್ಟು ಮಂದಿ ಇತರ ರಕ್ತಸಂಬಂಧಿಗಳನ್ನು ಹಾಗೂ 0.1ರಷ್ಟು ಮಂದಿ ಮೈದುನರನ್ನು ವಿವಾಹವಾಗುತ್ತಿದ್ದಾರೆ.
ರಕ್ತಸಂಬಂಧಿಗಳ ನಡುವಿನ ವಿವಾಹದಿಂದ ಜನಿಸುವ ಮಕ್ಕಳಲ್ಲಿ ವಂಶವಾಹಿ ವ್ಯತ್ಯಯ ಅಥವಾ ಅಪಸರಣ ಸಮಸ್ಯೆ ಕಾಣಿಸಿಕೊಳ್ಳುವ ಅಪಾಯವಿದೆ.
ಬೆಂಗಳೂರಿನ ಸೆಂಟರ್ ಫಾರ್ ಹ್ಯೂಮನ್ ಜೆನೆಟಿಕ್ಸ್ ನ ಸಲಹಾ ವೈದ್ಯೆ ಡಾ.ಕೃತಿ ವೃಷ್ಣಿ ಅವರ ಪ್ರಕಾರ, "ನಮ್ಮ ರೋಗಿಗಳ ಬಹುತೇಕ ಪೋಷಕರು ರಕ್ತಸಂಬಂಧಿಕರನ್ನು ವಿವಾಹವಾಗಿರುವುದು ಕಂಡುಬರುತ್ತದೆ. ಇದು ನಿಶ್ಚಿತವಾಗಿಯೂ ಮಕ್ಕಳಲ್ಲಿ ಹಲವು ಜನ್ಮಜಾತ ಸಮಸ್ಯೆಗಳು ಮತ್ತು ವಂಶವಾಹಿ ಸಮಸ್ಯೆಗಳಿಗೆ ಕಾರಣವಾಗುತ್ತವೆ.







