Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕೋವಿಡ್ ಸಾವುಗಳ ತಪ್ಪು ಮಾಹಿತಿ:...

ಕೋವಿಡ್ ಸಾವುಗಳ ತಪ್ಪು ಮಾಹಿತಿ: ವಿಶ್ವದಲ್ಲಿ ಭಾರತ ಅಗ್ರಸ್ಥಾನದಲ್ಲಿ

ಡಬ್ಲ್ಯುಎಚ್‌ಒ ವರದಿ

ಬನಜೋತ್ ಕೌರ್ಬನಜೋತ್ ಕೌರ್8 May 2022 11:05 AM IST
share
ಕೋವಿಡ್ ಸಾವುಗಳ ತಪ್ಪು ಮಾಹಿತಿ: ವಿಶ್ವದಲ್ಲಿ ಭಾರತ ಅಗ್ರಸ್ಥಾನದಲ್ಲಿ

ಕೋವಿಡ್ ಸಾವುಗಳನ್ನು ಕಡಿಮೆಯಾಗಿ ವರದಿ ಮಾಡಿರುವುದು ಭಾರತವೊಂದೇ ಅಲ್ಲ. ಈಜಿಈಜಿಪ್ಟ್ ಭಾರತಕ್ಕಿಂತ ಕಡಿಮೆ ಸಾವುಗಳನ್ನು ತೋರಿಸಿರುವ ಏಕೈಕ ದೇಶವಾಗಿದೆ. ಆದರೆ ಸಂಖ್ಯೆಗಳಲ್ಲಿ ಹೇಳುವುದಾದರೆ ಭಾರತವು ಅತ್ಯಂತ ಹೆಚ್ಚಿನ ಕೋವಿಡ್ ಸಾವುಗಳನ್ನು ಅಧಿಕೃತವಾಗಿ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಇತರ ಯಾವುದೇ ದೇಶವು ಇಷ್ಟೊಂದು ಸಾವುಗಳನ್ನು ಬಚ್ಚಿಟ್ಟಿಲ್ಲ ಮತ್ತು ಡಬ್ಲುಎಚ್‌ಒ ಬೆಳಕಿಗೆ ತಂದಿರುವ ಅಂಶಗಳನ್ನು ಭಾರತದಷ್ಟು ತೀಕ್ಷ್ಣವಾಗಿ ವಿರೋಧಿಸುತ್ತಿಲ್ಲ.

ಭಾರತದಲ್ಲಿ ಕೋವಿಡ್ ಸಾವುಗಳ ಪ್ರಮಾಣ ಅದರ ಅಧಿಕೃತ ಸಂಖ್ಯೆ ಗಿಂತ 10 ಪಟ್ಟು ಹೆಚ್ಚಾಗಿದೆ ಮತ್ತು ಡಿಸೆಂಬರ್ 2021ರವರೆಗೆ ಭಾರತದಲ್ಲಿ ಅತ್ಯಂತ ಹೆಚ್ಚಿನ,ಅಂದರೆ 47 ಲಕ್ಷ ಕೋವಿಡ್ ಸಾವುಗಳು ಸಂಭವಿಸಿವೆ ಎಂದು ಅಂದಾಜಿಸಲಾಗಿದೆ. ಇದು ವಿಶ್ವದ ಕೋವಿಡ್ ಹೆಚ್ಚುವರಿ ಸಾವುಗಳ ಅಂದಾಜುಗಳ ಕುರಿತು ಬಹುನಿರೀಕ್ಷಿತ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ವರದಿಯ ತೀರ್ಮಾನಗಳಲ್ಲೊಂದಾಗಿದೆ.

ವರದಿಯು ತಿಳಿಸಿರುವಂತೆ ಭಾರತದಲ್ಲಿಯ 47 ಲ. ಸಾವುಗಳ ಪೈಕಿ 8.30 ಲ. ಸಾವುಗಳು 2020ರಲ್ಲಿ ಮತ್ತು ಉಳಿದ ಸಾವುಗಳು 2021ರಲ್ಲಿ ಸಂಭವಿಸಿವೆ. ಭಾರತದ ಅಧಿಕೃತ ಕೋವಿಡ್ ಸಾವುಗಳ ಸಂಖ್ಯೆ ಮತ್ತು ಸಾಂಖ್ಯಿಕ ಮಾದರಿಗಳ ಆಧಾರದಲ್ಲಿ ಮಾಡಲಾಗಿರುವ ಸಾವುಗಳ ಅಂದಾಜು ತೀರ ವಿಭಿನ್ನವಾಗಿವೆ.

ಕೋವಿಡ್ ಸಾವುಗಳನ್ನು ಕಡಿಮೆಯಾಗಿ ವರದಿ ಮಾಡಿರುವುದು ಭಾರತವೊಂದೇ ಅಲ್ಲ. ಈಜಿಪ್ಟ್ ಭಾರತಕ್ಕಿಂತ ಕಡಿಮೆ ಸಾವುಗಳನ್ನು ತೋರಿಸಿರುವ ಏಕೈಕ ದೇಶವಾಗಿದೆ. ಆದರೆ ಸಂಖ್ಯೆಗಳಲ್ಲಿ ಹೇಳುವುದಾದರೆ ಭಾರತವು ಅತ್ಯಂತ ಹೆಚ್ಚಿನ ಕೋವಿಡ್ ಸಾವುಗಳನ್ನು ಅಧಿಕೃತವಾಗಿ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಇತರ ಯಾವುದೇ ದೇಶವು ಇಷ್ಟೊಂದು ಸಾವುಗಳನ್ನು ಬಚ್ಚಿಟ್ಟಿಲ್ಲ ಮತ್ತು ಡಬ್ಲುಎಚ್‌ಒ ಬೆಳಕಿಗೆ ತಂದಿರುವ ಅಂಶಗಳನ್ನು ಭಾರತದಷ್ಟು ತೀಕ್ಷ್ಣವಾಗಿ ವಿರೋಧಿಸುತ್ತಿಲ್ಲ.

ಜಾಗತಿಕ ಸರಾಸರಿಯಲ್ಲಿ ಅಧಿಕೃತ ಸಾವುಗಳಿಗಿಂತ ಮೂರು ಪಟ್ಟು ಸಾವುಗಳನ್ನು ಕಡಿಮೆಯಾಗಿ ತೋರಿಸಲಾಗಿದೆ. 60ರಿಂದ 69,70ರಿಂದ 79 ಮತ್ತು 80 ವರ್ಷ ಮತ್ತು ಅದಕ್ಕೂ ಹೆಚ್ಚಿನ ವಯೋಮಾನದ ಗುಂಪುಗಳಲ್ಲಿ ಅತ್ಯಂತ ಹೆಚ್ಚಿನ ಕೋವಿಡ್ ಸಾವುಗಳು ಸಂಭವಿಸಿವೆ.

ತನ್ನ ಅಂಕಿಸಂಖ್ಯೆಗಳು ಅಂತಿಮವಲ್ಲ ಮತ್ತು ಸಾಂಕ್ರಾಮಿಕವು ಇನ್ನೂ ಮರೆಯಾಗಿಲ್ಲ ಎಂದು ಡಬ್ಲುಎಚ್‌ಒ ವರದಿಯು ಹೇಳಿದೆ. ಆದರೆ ಈ ವರದಿಯು ಬಿಡುಗಡೆಯಾದ ಐದೇ ಗಂಟೆಗಳಲ್ಲಿ ಕೋವಿಡ್ ವಿರುದ್ಧ ಭಾರತದ ಹೋರಾಟದ ಮುಂಚೂಣಿಯಲ್ಲಿರುವ ಮೂವರು ಪ್ರಮುಖ ಸರಕಾರಿ ಅಧಿಕಾರಿಗಳಾದ ಕೋವಿಡ್ ಕಾರ್ಯಪಡೆಯ ಅಧ್ಯಕ್ಷ ವಿ.ಕೆ.ಪಾಲ್, ಐಸಿಎಂಆರ್‌ನ ಮಹಾ ನಿರ್ದೇಶಕ ಬಲರಾಮ ಭಾರ್ಗವ ಮತ್ತು ಏಮ್ಸ್ ದಿಲ್ಲಿಯ ಮುಖ್ಯಸ್ಥ ರಣದೀಪ್ ಗುಲೇರಿಯಾ ಅವರು ಡಬ್ಲ್ಯುಎಚ್‌ಒ ಅಂದಾಜುಗಳನ್ನು ತಿರಸ್ಕರಿಸಿ ಹೇಳಿಕೆಗಳನ್ನು ನೀಡಿದ್ದಾರೆ.

ಮೂವರೂ ಒಂದೇ ಬಗೆಯ ಆಕ್ಷೇಪಗಳನ್ನು ಎತ್ತಿದ್ದಾರಾದರೂ ಅವನ್ನು ಪ್ರತ್ಯೇಕವಾಗಿ ವ್ಯಕ್ತಪಡಿಸುವುದು ಅಗತ್ಯ ಎಂದು ಭಾವಿಸಿದ್ದರು. ಅಲ್ಲದೆ ತಾನು ಕಂಡುಕೊಂಡಿರುವ ಅಂಶಗಳನ್ನು ಪ್ರಕಟಿಸಲು ಡಬ್ಲ್ಯುಎಚ್‌ಒ ಕರೆದಿದ್ದ ಸುದ್ದಿಗೋಷ್ಠಿ ಚಾಲ್ತಿಯಲ್ಲಿದ್ದಾಗಲೇ ಭಾರತವು ತನ್ನ ಅಂದಾಜುಗಳ ಪುನರ್‌ಪರಿಶೀಲನೆಯನ್ನು ಪ್ರಕಟಿಸಿತ್ತು. ಡಬ್ಲ್ಯುಎಚ್‌ಒ ಅಂದಾಜುಗಳು ಮಾಡೆಲಿಂಗ್ ಅಥವಾ ಮಾದರಿ ಅಧ್ಯಯನಗಳನ್ನು ಆಧರಿಸಿವೆ ಮತ್ತು ಅದು ಹಾಗಿರಬಾರದಿತ್ತು ಎನ್ನುವುದು ಈ ಮೂವರು ಅಧಿಕಾರಿಗಳ ವಾದಗಳಲ್ಲಿಯ ಸಮಾನ ಅಂಶವಾಗಿತ್ತು.

ಇದು ಅಸಂಬದ್ಧವಾಗಿದೆ. ಮಾಡೆಲಿಂಗ್ ಪ್ರಮುಖ ಸಾಧನವಾಗಿದ್ದು, ಇದನ್ನು ಬಳಸಿ ಸಂಶೋಧಕರು ನೈಜ ಪ್ರಪಂಚದ ಡಾಟಾಗಳಲ್ಲಿನ ಅಂತರಗಳನ್ನು ತುಂಬುತ್ತಾರೆ. ಭಾರತದಲ್ಲಿ ಸಾವುಗಳ ನೋಂದಣಿ ಮಾಹಿತಿಯು ಎಲ್ಲ ರಾಜ್ಯಗಳಿಂದ ಏಕಕಾಲದಲ್ಲಿ ಲಭ್ಯವಾಗುವುದಿಲ್ಲ ಮತ್ತು ಪರಿಷ್ಕರಣೆಗೊಳ್ಳುವುದಿಲ್ಲ. ಇಂತಹ ಮಾಹಿತಿ ವ್ಯವಸ್ಥೆ ಅಸ್ತಿತ್ವದಲ್ಲಿದ್ದರೆ ಹೆಚ್ಚುವರಿ ಸಾವುಗಳನ್ನು ಅಂದಾಜಿಸುವ ಪ್ರಕ್ರಿಯೆ ತುಲನಾತ್ಮಕವಾಗಿ ಸರಳವಾಗಿರುತ್ತಿತ್ತು. ಇದು ಸಾಂಕ್ರಾಮಿಕದ ವರ್ಷದಲ್ಲಿ ಎಲ್ಲ ಕಾರಣಗಳಿಂದ ಸಂಭವಿಸಿರುವ ಸಾವುಗಳ ಸಂಖ್ಯೆ ಮತ್ತು ಹಿಂದಿನ ವರ್ಷದ ಡಾಟಾವನ್ನು ಆಧರಿಸಿ ಸಾಂಕ್ರಾಮಿಕವಿರದಿದ್ದರೆ ನಿರೀಕ್ಷಿಸಬಹುದಾದ ಸಾವುಗಳ ಸಂಖ್ಯೆಯ ನಡುವಿನ ಅಂತರವಾಗಿದೆ. ಆದರೆ ಇಂತಹ ಮಾಹಿತಿ ವ್ಯವಸ್ಥೆಯ ಅನುಪಸ್ಥಿತಿಯಲ್ಲಿ ಮಾಡೆಲಿಂಗ್ ಅಗತ್ಯವಾಗುತ್ತದೆ.

ಭಾರತದಲ್ಲಿ ನಾಗರಿಕ ನೋಂದಣಿ ವ್ಯವಸ್ಥೆ (ಸಿಆರ್‌ಎಸ್)ಯು ಮರಣ ನೋಂದಣಿ ಡಾಟಾದ ಮೂಲವಾಗಿದೆ. ಸಿಆರ್‌ಎಸ್ ಎಲ್ಲ ಕಾರಣಗಳಿಂದ ಸಂಭವಿಸಿದ ಸಾವುಗಳನ್ನು ಒಳಗೊಂಡಿರುವುದರಿಂದ ಅದನ್ನು ಆಲ್-ಕಾಸ್ ಮಾರ್ಟಲಿಟಿ (ಎಸಿಎಂ) ಡಾಟಾ ಎಂದೂ ಕರೆಯಲಾಗುತ್ತದೆ.

ಮೇ 3ರಂದು,ಅಂದರೆ ಡಬ್ಲ್ಯುಎಚ್‌ಒ ತನ್ನ ವರದಿಯನ್ನು ಬಿಡುಗಡೆ ಗೊಳಿಸುವ ಕೇವಲ ಎರಡು ದಿನಗಳ ಮೊದಲು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಎರಡು ಸಾಂಕ್ರಾಮಿಕ ವರ್ಷಗಳ ಪೈಕಿ 2020ಕ್ಕೆ ಮಾತ್ರ ಎಸಿಎಂ ಡಾಟಾವನ್ನು ಬಿಡುಗಡೆಗೊಳಿಸಿದ್ದರು.

ಡಬ್ಲ್ಯುಎಚ್‌ಒ ತನ್ನ ಅಂದಾಜುಗಳನ್ನು ಸಿದ್ಧಪಡಿಸುತ್ತಿದ್ದಾಗ ಈ ಎಸಿಎಂ ಡಾಟಾವನ್ನು ತಾನು ಅದರೊಂದಿಗೆ ಹಂಚಿ ಕೊಂಡಿದ್ದೆ. ಆದಾಗ್ಯೂ ಡಬ್ಲ್ಯುಎಚ್‌ಒ ಅದನ್ನು ಕಡೆಗಣಿಸಿದೆ ಮತ್ತು ಕಾರಣಗಳು ಅದಕ್ಕೆ ಮಾತ್ರ ಗೊತ್ತು ಎಂದು ಆರೋಗ್ಯ ಸಚಿವಾಲಯವು ಮೇ 5ರಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಸುದ್ದಿಗೋಷ್ಠಿಯಲ್ಲಿ ಡಬ್ಲ್ಯುಎಚ್‌ಒ ಸಹಾಯಕ ಮಹಾ ನಿರ್ದೇಶಕಿ (ಡಾಟಾ ಮತ್ತು ಅನಾಲಿಟಿಕ್ಸ್) ಸಮೀರಾ ಅಸ್ಮಾ ಅವರು,ಭಾರತದ ಅಧಿಕೃತ ಎಸಿಎಂ ಅಂಕಿಸಂಖ್ಯೆಗಳ ಬಗ್ಗೆ ಡಬ್ಲ್ಯುಎಚ್‌ಒಗೆ ಎರಡು ದಿನಗಳ ಹಿಂದಷ್ಟೇ ಗೊತ್ತಾಗಿತ್ತು ಎಂದು ಹೇಳಿದ್ದರು. ‘ನಮ್ಮ ಮುಂದಿನ ಪರಿಷ್ಕರಣೆಯಲ್ಲಿ ಭಾರತವು ಒದಗಿಸಿರುವ ಡಾಟಾ ವನ್ನು ಸೇರಿಸಿಕೊಳ್ಳುತ್ತೇವೆ ’ ಎಂದು ಈ ವರದಿಗಾರ್ತಿಯ ಪ್ರಶ್ನೆಗೆ ಅಸ್ಮಾ ಉತ್ತರಿಸಿದ್ದಾರೆ.

ಒಂದು ವೇಳೆ ಭಾರತವು ತನ್ನ 2020ರ ಡಾಟಾವನ್ನು ಮೊದಲೇ ಲಭ್ಯವಾಗಿಸಿದ್ದರೂ 2021ರ ಡಾಟಾವನ್ನು ಅದು ಇನ್ನಷ್ಟೇ ಬಿಡುಗಡೆ ಗೊಳಿಸಬೇಕಿದೆ. ಈ ಡಾಟಾ ನಿರ್ಣಾಯಕವಾಗಿದೆ,ಏಕೆಂದರೆ ಭಾರತದಲ್ಲಿ ಕೋವಿಡ್ ಸಾವುಗಳ ಕುರಿತು ಎಲ್ಲ ಸ್ವತಂತ್ರ ಅಂದಾಜುಗಳು 2021ರಲ್ಲಿ ಸಾವುಗಳ ಸಂಖ್ಯೆಯಲ್ಲಿ ಬೃಹತ್ ಏರಿಕೆಯನ್ನು ದಾಖಲಿಸಿವೆ.

ಕೋವಿಡ್ ಸಾವುಗಳ ಕುರಿತು ಭಾರತ ಸರಕಾರದ ಅಧಿಕೃತ ಅಂಕಿ ಅಂಶಗಳಲ್ಲಿ ಪ್ರಶ್ನಿಸಿರುವುದರಲ್ಲಿ ಡಬ್ಲ್ಯುಎಚ್‌ಒ ಮೊದಲನೆಯದೇನಲ್ಲ. ಇದಕ್ಕೆ ಮುನ್ನ ಹಲವಾರು ಅಧ್ಯಯನಗಳೂ ಭಾರತದಲ್ಲಿ ಕೋವಿಡ್‌ನಿಂದಾಗಿ 30ರಿಂದ 50 ಲಕ್ಷ ಸಾವುಗಳು ಸಂಭವಿಸಿವೆ,ಜುಜುಬಿ ಅಧಿಕೃತ ಸಂಖ್ಯೆಯಾದ ಐದು ಲಕ್ಷದಷ್ಟು ಅಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದವು.

thewire.in

share
ಬನಜೋತ್ ಕೌರ್
ಬನಜೋತ್ ಕೌರ್
Next Story
X