ವಿಟ್ಲ: 14 ವರ್ಷದ ಬಾಲಕ ಆತ್ಮಹತ್ಯೆ
ಬಂಟ್ವಾಳ, ಮೇ 8: ಕ್ಷುಲ್ಲಕ ಕಾರಣಕ್ಕೆ ಬಾಲಕನೋರ್ವ ಆತ್ಮಹತ್ಯೆ ಮಾಡಿರುವ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪುಚ್ಚೆಗುತ್ತು ಜೋಗಿಬೆಟ್ಟು ಎಂಬಲ್ಲಿ ನಡೆದಿರುವುದು ವರದಿಯಾಗಿದೆ.
ಇಲ್ಲಿನ ನಿವಾಸಿ ವಾಮನ ಪೂಜಾರಿ ಎಂಬವರ ಪುತ್ರ ಉಜ್ವಲ್ (14) ಆತ್ಮಹತ್ಯೆ ಮಾಡಿರುವ ಬಾಲಕ.
ಟಿವಿ ನೋಡುತ್ತಿದ್ದ ಉಜ್ವಲ್ ನಿಗೆ ಹೆತ್ತವರು ಹೆಚ್ಚು ಟಿವಿ ನೋಡದಂತೆ ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ. ಇದರಿಂದ ಅವರುಮನನೊಂದು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈತ ವಿಟ್ಲ ಮಾದರಿ ಸರಕಾರಿ ಹಿರಿಯ ಪ್ರಾಥಮಿ ಶಾಲೆಯ ವಿದ್ಯಾರ್ಥಿ.
Next Story