ರಸ್ತೆ ಅಪಘಾತದಲ್ಲಿ ಪೋಷಕ ನಟಿ ಸುನೇತ್ರಾ ಪಂಡಿತ್ ಗೆ ಗಾಯ

ಬೆಂಗಳೂರು, ಮೇ 8: ಚಿತ್ರೀಕರಣ ಮುಗಿಸಿಕೊಂಡು ಸ್ಕೂಟರ್ ನಲ್ಲಿ ಮನೆಗೆ ಹೋಗುತ್ತಿದ್ದ ಕನ್ನಡ ಚಿತ್ರರಂಗದ ಪೋಷಕ ನಟಿ ಸುನೇತ್ರಾ ಪಂಡಿತ್ ಆಯತಪ್ಪಿ ಕೆಳಗೆ ಬಿದ್ದು ತಲೆಗೆ ಗಾಯಗೊಂಡಿರುವ ಘಟನೆ ನಡೆದಿದೆ.
ಶನಿವಾರ ತಡರಾತ್ರಿ ಎನ್‍ಆರ್‍ಕಾಲೋನಿ 9ನೇ ಅಡ್ಡ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡಿರುವ ನಟಿ ಸುನೇತ್ರಾ ಪಂಡಿತ್ (40) ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಲ್ಮೆಟ್ ಧರಿಸಿದ್ದರೂ ಅವೈಜ್ಞಾನಿಕ ರಸ್ತೆ ಹಂಪ್‍ನಿಂದ ಅಪಘಾತ ಸಂಭವಿಸಿ ಸುನೇತ್ರಾ ಅವರ ತಲೆಗೆ ಪೆಟ್ಟಾಗಿ ರಕ್ತ ಬರುತ್ತಿತ್ತು. ಅವರನ್ನು ನೋಡಿದ ಸ್ಥಳೀಯರು ಸಹಾಯಕ್ಕೆ ಧಾವಿಸಿದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಸಂಬಂಧ ಬಸವನಗುಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Next Story





